ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಾರವಾರ ಹಾಗೂ ನೆಹರು ಯುವಕೇಂದ್ರ, ಕಾರವಾರ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನ.23 ರಂದು ಬೆಳಿಗ್ಗೆ 10 ಗಂಟೆಗೆ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಕಾರವಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ನಡೆಯುವ ಸ್ಪರ್ಧೆಗಳ ವಿವರ: ವಿಷಯಾಧಾರಿತ ಸ್ಪರ್ಧೆಗಳು, ಸಾಂಸ್ಕೃತಿಕ ಸ್ಪರ್ಧೆ: ಜಾನಪದ ನೃತ್ಯ (ತಂಡ), ಜಾನಪದ ನೃತ್ಯ (ತಂಡ), ಜಾನಪದ ಗೀತೆ (ತಂಡ), ಜಾನಪದ ನೃತ್ಯ (ವೈಯಕ್ತಿಕ) ಜಾನಪದ ಗೀತೆ (ವೈಯಕ್ತಿಕ).
ಜೀವನ ಕೌಶಲ್ಯ ಸ್ಪರ್ಧೆ: ಕವಿತೆ ಬರೆಯುವುದು, ಕಥೆ ಬರೆಯುವುದು, ಚಿತ್ರಕಲೆ ಎಲ್ಲಾ ಸ್ಪರ್ಧೆಗಳು ಸ್ಪರ್ಧೆಗಳು ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಇರಬೇಕು. (ಘೋಷಣೆ) ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಇರಬೇಕು, (ರಾಷ್ಟ್ರ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು) ಕನ್ನಡ ಭಾಷೆಯನ್ನು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದವರೆಗೆ ಮಾತ್ರ ಸೀಮಿತಗೊಳಿಸಿದೆ. ಸ್ಪರ್ಧಿಗಳು ಸಿದ್ದಪಡಿಸಿಕೊಂಡಿರುವ ಆಯ್ದ ವಿಷಯಗಳ ಬಗ್ಗೆ 3 ನಿಮಿಷಗಳ ಭಾಷಣ ಮಾಡಬೇಕು. ಯುವಕೃತಿ ವಿಭಾಗದಲ್ಲಿ, ಗುಡಿ ಕೈಗಾರಿಕೆಯ ಕಲಾ ಪ್ರಕಾರ, ನೇಕಾರಿಕೆ/ ಜವಳಿ, ಕೃಷಿ ಉತ್ಪನ್ನಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸೂಚನೆ:- ಸ್ಪರ್ಧಿಗಳು ಉತ್ತರ ಕನ್ನಡ ಜಿಲ್ಲೆಯವರಾಗಿರಬೇಕು. (ವಾಸಸ್ಥಳ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು), ಸ್ಪರ್ಧಿಗಳು 15 ರಿಂದ 29 ವರ್ಷದ ಒಳಗಿರಬೇಕು. ವಯಸ್ಸಿನ ದೃಢೀಕರಣ ಪತ್ರ ಕಡ್ಡಾಯವಾಗಿ ನೀಡಬೇಕು. (ಆಧಾರ ಕಾರ್ಡ ಮೂಲ ಪ್ರತಿ/ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರದ ದಾಖಲೆಯನ್ನು ತರತಕ್ಕದ್ದು.) ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬೆಳಿಗ್ಗೆ 10 ಗಂಟೆಗೆ ಅಜ್ವಿ ಹೊಟೆಲ್, ಕಾರವಾರ ಇಲ್ಲಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು. ಪಕ್ಕ ವಾದ್ಯ, ಧ್ವನಿ ಮುದ್ರಿತ ಕ್ಯಾಸೆಟ್‌ಗಳು, ರಂಗ ಸಜ್ಜಿಕೆ, ವೇಷಭೂಷಣ ಇತ್ಯಾದಿ ಪೂರಕ ಉಪಕರಣಗಳನ್ನು ಸ್ಪರ್ಧಿಗಳೇ ಸಿದ್ದ ಪಡಿಸಿಕೊಳ್ಳಬೇಕು.
ಯಾವುದೇ ಸ್ಪರ್ಧೆಗಳಲ್ಲಿ ಚಲನಚಿತ್ರ ಗೀತೆಗಳಿಗೆ ಅವಕಾಶವಿರುವುದಿಲ್ಲ. ಜಾನಪದ ನೃತ್ಯ ಮತ್ತು ಗೀತೆ ವಿಭಾಗದಲ್ಲಿ ಪೂರ್ತಿ ಭಾರತೀಯ/ಕರ್ನಾಟಕದ ಜಾನಪದದ ಪ್ರಕಾರ ಮಾತ್ರ ಇರಬೇಕು. ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಬ್ಯಾಂಕ್ ಖಾತೆಯ ಝೆರಾಕ್ಸ್ ಪ್ರತಿಯನ್ನು ತರತಕ್ಕದ್ದು. (ವಿಜೇತ ಸ್ಪರ್ಧಾಳುಗಳಿಗೆ ನಗದು ಬಹುಮಾನ ಪಾವತಿಸಲು) ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಸತತವಾಗಿ 3 ವರ್ಷಗಳು ಭಾಗವಹಿಸಿದ ಅಥವಾ ಒಂದು ಬಾರಿ ಪದಕ ಪಡೆದ ಸ್ಪರ್ಧಿಗಳು ಜಿಲ್ಲಾ ಹಂತದಿಂದಲೇ ಸ್ಪರ್ಧಿಸುವಂತಿಲ್ಲ.
ಭಾಗವಹಿಸುವಂತಹ ಸ್ಪರ್ಧಾಳುಗಳಿಗೆ ಹೋಗಿಬರುವ ಸಾಮಾನ್ಯ ಪ್ರಯಾಣ ಭತ್ಯೆಯನ್ನು ಸ್ಥಳದಲ್ಲೇ ನೀಡಲಾಗುವುದು ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು. ಸ್ಪರ್ಧಾ ಕಾರ್ಯಕ್ರಮದಲ್ಲಿ ಕೇವಲ ಪ್ರಥಮ ಸ್ಥಾನವನ್ನು ಪಡೆದವರು ಮಾತ್ರ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲು ಅರ್ಹರಾಗಿರುತ್ತಾರೆ. ವಿಜೇತ ಸ್ಪರ್ಧಾಳುಗಳಿಗೆ ಟ್ರೋಫಿ, ಮೆಡಲ್ಸ್ ಮತ್ತು ನಗದು ಬಹುಮಾನ ನೀಡಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.