ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ವೀಲ್ಹಿಂಗ್: ಯುವಕನ ವಿರುದ್ಧ ಪ್ರಕರಣ ದಾಖಲು 

ಬೆಂಗಳೂರು: ತಲಘಟ್ಟಪುರ ಬಳಿ ಅಜಾಕರೂಕತೆಯಿಂದ ವೀಲ್ಹಿಂಗ್ ಮಾಡುತ್ತಾ ಸ್ಕೂಟಿ ಚಲಾಯಿಸುತ್ತಿದ್ದ 21 ವರ್ಷದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯುವಕನನ್ನು ನರೇಶ್ ಜಿ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಿಗ್ಗೆ 11.45 ರ ಸುಮಾರಿಗೆ…

ಬೆಂಗಳೂರು: ತಲಘಟ್ಟಪುರ ಬಳಿ ಅಜಾಕರೂಕತೆಯಿಂದ ವೀಲ್ಹಿಂಗ್ ಮಾಡುತ್ತಾ ಸ್ಕೂಟಿ ಚಲಾಯಿಸುತ್ತಿದ್ದ 21 ವರ್ಷದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯುವಕನನ್ನು ನರೇಶ್ ಜಿ ಎಂದು ಗುರುತಿಸಲಾಗಿದೆ.

ಭಾನುವಾರ ಬೆಳಿಗ್ಗೆ 11.45 ರ ಸುಮಾರಿಗೆ ಅಂಜನಪುರ 80 ಅಡಿ ರಸ್ತೆಯಲ್ಲಿ ಸುಜುಕಿ ಆಕ್ಸೆಸ್ ಸ್ಕೂಟರ್ನಲ್ಲಿ ಯುವಕ ಹೆಲ್ಮೆಟ್ ಇಲ್ಲದೇ, ವೀಲ್ಹಿಂಗ್ ಮಾಡುತ್ತಾ ಅಜಾಗರೂಕತೆಯಿಂದ ಬೈಕ್ ಸವಾರಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗಸ್ತು ಸಿಬ್ಬಂದಿ ಆತನನ್ನು ಸ್ಥಳದಲ್ಲೇ ಬಂಧಿಸಿ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಗೆ ಕರೆದೊಯ್ದರು. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 281 (ರ‌್ಯಾಶ್ ಡ್ರೈವಿಂಗ್ ಅಥವಾ ಸಾರ್ವಜನಿಕ ದಾರಿಯಲ್ಲಿ ಸವಾರಿ) ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.