Boys Drown Death: ದನ ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ನಾಪತ್ತೆ: ಓರ್ವನ ಶವ ಪತ್ತೆ

ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ದನ ಮೇಯಿಸಲು ತೆರಳಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದ ಬಾಲಕರ ಪೈಕಿ ಓರ್ವ ಬಾಲಕನ ಶವ ಪತ್ತೆಯಾಗಿದೆ. ಶಂಕರ ಮೇಟಿ(10) ಶವವಾಗಿ ಪತ್ತೆಯಾದ…

ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ದನ ಮೇಯಿಸಲು ತೆರಳಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದ ಬಾಲಕರ ಪೈಕಿ ಓರ್ವ ಬಾಲಕನ ಶವ ಪತ್ತೆಯಾಗಿದೆ. ಶಂಕರ ಮೇಟಿ(10) ಶವವಾಗಿ ಪತ್ತೆಯಾದ ಬಾಲಕನಾಗಿದ್ದಾನೆ.

ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನಲೆ ಬಾಲಕರಾದ ಶಂಕರ ಮೇಟಿ ಹಾಗೂ ಶ್ರೀಯಣ್ಣ ಚಂದ್ರಕಾಂತ(8) ದನ ಮೇಯಿಸಲು ತೆರಳಿದ್ದರು.‌ ಈ ವೇಳೆ ಕಾಲು ಜಾರಿ ಇಬ್ಬರೂ ಬಾಲಕರು ಹಿರೇಹಳ್ಳಕ್ಕೆ ಬಿದ್ದಿದ್ದರು. ಭಾನುವಾರ ತಡರಾತ್ರಿವರೆಗೂ ಅಗ್ನಿಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದರೂ ಬಾಲಕರ ಕುರಿತು ಸುಳಿವು ಸಿಕ್ಕಿರಲಿಲ್ಲ.

ಸೋಮವಾರ ಮದ್ಯಾಹ್ನದ ವೇಳೆಗೆ ಬಾಲಕ ಶಂಕರ ಮೇಟಿ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಶ್ರೀಯಣ್ಣ ಚಂದ್ರಕಾಂತ ಎಂಬ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.