ಉಡುಪಿ: ಉಡುಪಿ ನಗರದ ಬಡಗು ಪೇಟೆಯ ಫ್ಲ್ಯಾಟ್‌ವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ಉಂಟಾಗಿದೆ. ಆದಿತ್ಯ ಟವರ್‌ನ ಎರಡನೇ ಮಹಡಿಯಲ್ಲಿದ್ದ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಭಾರೀ ದುರಂತ ತಪ್ಪಿದೆ.
ಸೋಮವಾರ ರಾತ್ರಿ ವೇಳೆ ಮಕ್ಕಳು ಸಹಿತ 8 ಮಂದಿ ಕುಟುಂಬಸ್ಥರು ಮನೆಯಲ್ಲಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ತಗುಲಿದ್ದು, ಕೂಡಲೇ ಮನೆಯವರು ಹೊರಗೆ ಓಡಿಹೋಗಿದ್ದಾರೆ. ಬಳಿಕ ಸಿಲಿಂಡರ್ ಸ್ಪೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ಗೋಡೆಗಳು ಬಿರುಕು ಬಿಟ್ಟಿದ್ದು, ಎರಡು ಮನೆಗಳಿಗೆ ಹಾನಿ ಉಂಟಾಗಿದೆ.
ಸಿಲಿಂಡರ್ ಸ್ಪೋಟ ಬೆನ್ನಲ್ಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.