ದಾವಣಗೆರೆ: ನವಜಾತ ಶಿಶುವನ್ನು ಕಾಲುವೆಗೆ ಎಸೆದಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಜಯಶ್ರೀ ಲೇಔಟ್‌ನ ಬೊಂಗಲೆ ಆಸ್ಪತ್ರೆ ಬಳಿ ನಡೆದಿದೆ.
ಮಗು ಜನಿಸಿದ ಕೂಡಲೇ, ನಿರ್ದಯಿ ಜನರು ಅದರ ಕರುಳಿನ ಸಮೇತ ಅದನ್ನು ಕಾಲುವೆಗೆ ಎಸೆದು ಮಾನವೀಯತೆಯನ್ನು ಮರೆತು, ಕ್ರೂರಿ ಜನರು ಮಗುವನ್ನು ಚರಂಡಿಗೆ ಎಸೆದಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಗುವನ್ನು ಕೊಲೆ ಮಾಡಿ ಚರಂಡಿಗೆ ಎಸೆದಿದ್ದಾರೆಯೇ? ಅನೈತಿಕ ಸಂಬಂಧದ ಪರಿಣಾಮವಾಗಿ ಜನಿಸಿದ ಮಗುವನ್ನು ಎಸೆದಿದ್ದಾರ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಮಗುವನ್ನು ಎಸೆದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಾ ಹುಡುಕಾಟ ಮುಂದುವರಿಸಿದ್ದಾರೆ.