ಪಿಗ್ಮಿ ಹಣಕ್ಕಾಗಿ ಕತ್ತು ಹಿಸುಕಿ ಮನೆಯಲ್ಲೇ ವೃದ್ಧೆ ಹತ್ಯೆ!

ಕಾರವಾರ: ಪಿಗ್ಮಿ ಸಂಗ್ರಹಿಸುತ್ತಿದ್ದ ಒಂಟಿ ಮಹಿಳೆಯ ಮನೆಯ ಹೆಂಚು ತೆಗೆದು ಒಳ ನುಗ್ಗಿದ ದುಷ್ಕರ್ಮಿಗಳು, ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಿ ಮನೆಯಲ್ಲಿದ್ದ ಪಿಗ್ಮಿ ಹಣವನ್ನ ದೋಚಿಕೊಂಡು ಹೋಗಿರುವ ಘಟನೆ ಸಿದ್ದಾಪುರ ಪಟ್ಟಣದ ಸೊರಬ…

ಕಾರವಾರ: ಪಿಗ್ಮಿ ಸಂಗ್ರಹಿಸುತ್ತಿದ್ದ ಒಂಟಿ ಮಹಿಳೆಯ ಮನೆಯ ಹೆಂಚು ತೆಗೆದು ಒಳ ನುಗ್ಗಿದ ದುಷ್ಕರ್ಮಿಗಳು, ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಿ ಮನೆಯಲ್ಲಿದ್ದ ಪಿಗ್ಮಿ ಹಣವನ್ನ ದೋಚಿಕೊಂಡು ಹೋಗಿರುವ ಘಟನೆ ಸಿದ್ದಾಪುರ ಪಟ್ಟಣದ ಸೊರಬ ರಸ್ತೆಯ ಬಸವನಗಲ್ಲಿಯಲ್ಲಿ ನಡೆದಿದೆ. ಗೀತಾ ಪ್ರಭಾಕರ್ ಹುಂಡೇಕರ್(72) ಹತ್ಯೆಯಾದ ದುರ್ದೈವಿ ಮಹಿಳೆಯಾಗಿದ್ದಾಳೆ.

ಮೃತ ಗೀತಾ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ‌ಇವರು ನಿತ್ಯವೂ ಐದರಿಂದ ಹತ್ತು ಸಾವಿರದ ತನಕ ಪಿಗ್ಮಿ ಹಣ ಸಂಗ್ರಹಿಸುತ್ತಿದ್ದು, ಪಿಗ್ಮಿ ಕಲೆಕ್ಟ್ ಮಾಡಿದ ಹಣವನ್ನ ಮರುದಿನ ಬ್ಯಾಂಕ್‌ಗೆ ಜಮೆ‌ ಮಾಡುತ್ತಿದ್ದರು. ಮಹಿಳೆಯ ಬಳಿ ಹಣ ಇರುವುದನ್ನ ಖಚಿತಪಡಿಸಿಕೊಂಡ ದುಷ್ಕರ್ಮಿಗಳು ಮಹಿಳೆಯ ಬಚ್ಚಲ‌‌ ಮನೆಯ ಹೆಂಚು ತೆಗೆದು ಒಳನುಗ್ಗಿ, ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಆಕೆಯ ಬಳಿಯಿಂದ ಹಣವನ್ನ ಕದ್ದು ಪರಾರಿಯಾಗಿದ್ದಾರೆ.

ಈ ಬಗ್ಗೆ ಮೃತ ಮಹಿಳೆಯ ಅಳಿಯ ರಾಘವೇಂದ್ರ ನಾಯ್ಕ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.