ದಾವಣಗೆರೆ ಆ.03 :ಭಾರತೀಯ ಸೇನೆ/ಇತರೆ ಸಮವಸ್ತ್ರ, ಸೇವೆಗಳಿಗೆ ಆಯ್ಕೆಯಾಗಲು ಉದ್ದೇಶಿಸಿರುವ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿಯುತ 4 ತಿಂಗಳ ಪೂರ್ವ ಸಿದ್ದತೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕರ್ನಾಟಕ ನಿವಾಸಿಯಾಗಿರಬೇಕು. ಪರಿಶಿಷ್ಟ ಜಾತಿಗೆ ಸೇರಿರಬೇಕು, ಕುಟುಂಬದ ವಾರ್ಷಿಕ ಆದಾಯ ರೂ.5 ಲಕ್ಷದೊಳಗಿರಬೇಕು, ಅಭ್ಯಥಿಯು 01 ಅಕ್ಟೋಬರ್ 2000 ರಿಂದ 01 ಏಪ್ರಿಲ್ 2005ರ ನಡುವೆ ಜನಸಿರಬೇಕು, 10ನೇ ತರಗತಿ ಉತ್ತೀರ್ಣರಾಗಿರಬೇಕು.
ತರಬೇತಿಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಯಾವುದಾದರೊಂದು ವಸತಿ ಶಾಲೆಯಲ್ಲಿ ನೀಡಲಾಗುತಿದ್ದು, ಅಭ್ಯರ್ಥಿಯು ಈ ಮೂರು ಜಿಲ್ಲೆಗಳಲ್ಲಿ ಯಾವ ಜಿಲ್ಲೆಯಲ್ಲಿ ತರಬೇತಿ ಪಡೆಯಲು ಇಚ್ಚಿಸುತ್ತೀರೋ ಆ ಜಿಲ್ಲೆಯ ಜಂಟಿ/ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಅರ್ಜಿಯನ್ನು ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಲು ಆ.15 ಕೊನೆಯದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ http://sw.kar.nic.in ನಿಂದ ಹಾಗೂ ಸಹಾಯವಾಣಿ ಸಂಖ್ಯೆ ದಕ್ಷಿಣ ಕನ್ನಡ ದೂ.ಸಂ: 0824-2451237, ಉಡುಪಿ ದೂ.ಸಂ: 0820-2574892, ಉತ್ತರ ಕನ್ನಡ ದೂ.ಸಂ:0838-2226514, ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಬೆಂಗಳೂರು ದೂ.ಸಂ:080-22207784 ನ್ನು ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.