ದೆಹಲಿ: ಸಾಮಾನ್ಯವಾಗಿ ಪತಿ ತನ್ನ ಹೆಂಡತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪ್ರಕರಣಗಳ ಕುರಿತು ನೀವು ಅನೇಕ ಬಾರಿ ಕೇಳಿರಬಹುದು. ಇದಕ್ಕೆ ತದ್ವಿರುದ್ಧವಾಗಿ ಪತ್ನಿಯೇ ತನ್ನ ಪತಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದು ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಲೈಂಗಿಕ ಕ್ರಿಯೆಗೆ ಒಪ್ಪದ ಪತಿಯನ್ನು ಆಕೆ ನಪುಂಸಕ ಎಂದು ಕರೆಯುತ್ತಿದ್ದಳು ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಪತ್ನಿ ತನ್ನ ಪತಿಯನ್ನು ನಪುಂಸಕ ಅಥವಾ ತೃತೀಯಲಿಂಗಿ ಎಂದು ಕರೆದರೆ ಅದು ಆ ವ್ಯಕ್ತಿಗೆ ಮಾತ್ರವಲ್ಲದೇ ಅವನ ಕುಟುಂಬದ ವಿರುದ್ಧ ಕ್ರೌರ್ಯ ಪ್ರದರ್ಶಿಸಿದಂತೆ ಎಂದು ಹೇಳಿದೆ.
ನ್ಯಾಯಮೂರ್ತಿ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ವಿಭಾಗೀಯ ಪೀಠವು ಮಹಿಳೆಯ ಮೇಲ್ಮನವಿಯ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಮಹಿಳೆ ತನ್ನ ಪತಿಯನ್ನು ನಪುಂಸಕ ಎಂದು ಕರೆಯುತ್ತಿದ್ದರು ಎಂದು ಆಕೆಯ ಅತ್ತೆ ನ್ಯಾಯಾಲಯದ ಎದುರು ಹೇಳಿಕೆ ನೀಡಿದ್ದರು.
ಈ ಕುರಿತು ಪೀಠವು, “ಕುಟುಂಬ ನ್ಯಾಯಾಲಯವು ದಾಖಲಿಸಿರುವ ಸಂಶೋಧನೆಗಳ ಆಧಾರದಲ್ಲಿ ಮೇಲ್ಮನವಿದಾರ-ಪತ್ನಿಯ ಕೃತ್ಯಗಳು ಮತ್ತು ನಡವಳಿಕೆಯು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ತೋರುತ್ತದೆ. ಪತಿಯನ್ನು ನಪುಂಸಕ ಎಂದು ಕರೆಯುವುದು ಅಥವಾ ನಪುಂಸಕನಿಗೆ ಜನ್ಮ ನೀಡಿರುವುದಾಗಿ ಆತನ ತಾಯಿಗೆ ಹೇಳುವುದು ಮಾನಸಿಕ ಕ್ರೌರ್ಯ ಎಂದು ನ್ಯಾಯಾಲಯ ಹೇಳಿದೆ.
‘ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ ಪತ್ನಿ’
ಪತ್ನಿಗೆ ಪೋರ್ನ್ ವೀಡಿಯೋ ನೋಡುವ ಚಟವಿದೆ ಎಂದು ಪತಿ ಆರೋಪಿಸಿದ್ದರು. ಅಲ್ಲದೇ ಲೈಂಗಿಕ ಕ್ರಿಯೆಯ ಅವಧಿಯನ್ನು ದಾಖಲಿಸುವಂತೆ ಹೆಂಡತಿ ಒತ್ತಾಯಿಸುತ್ತಿದ್ದಳು. “ಒಂದು ಬಾರಿಗೆ ಕನಿಷ್ಠ 10-15 ನಿಮಿಷಗಳ ಕಾಲ ಲೈಂಗಿಕ ಕ್ರಿಯೆ ಇರಬೇಕು ಮತ್ತು ರಾತ್ರಿಯಲ್ಲಿ ಕನಿಷ್ಠ ಮೂರು ಸಂಭೋಗಿಸಬೇಕು” ಎಂದು ಹೇಳುತ್ತಿದ್ದಳು ಎಂದು ಪತಿ ಹೇಳಿಕೊಂಡಿದ್ದಾನೆ.