ಶಿರಸಿ: ಬಸ್‌ನಲ್ಲಿ ತೆರಳುತ್ತಿದ್ದ ಪ್ರಯಾಣಿಕನಿಗೆ ಚಾಕು ಇರಿದು ಹತ್ಯೆಗೈದಿರುವ ಆತಂಕಕಾಗಿ ಘಟನೆ ನಗರದಲ್ಲಿ ನಡೆದಿದೆ. ಗಂಗಾಧರ ಕೊಲೆಯಾದ ದುರ್ದೈವಿಯಾಗಿದ್ದಾನೆ.
ಗಂಗಾಧರ ಪತ್ನಿಯೊಂದಿಗೆ ಬಸ್‌ನಲ್ಲಿ ಬೆಂಗಳೂರಿಗೆಂದು ಹೊರಟಿದ್ದು, ಇದೇ ಬಸ್‌ನಲ್ಲಿ ಕೊಲೆಗೈದ ಆರೋಪಿಯೂ ಪ್ರಯಾಣಿಸುತ್ತಿದ್ದ. ಬಸ್ಸು ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ, ಬಸ್ ನಲ್ಲಿಯೇ ಗಂಗಾಧರನೊಂದಿಗೆ ಜಗಳ ತೆಗೆದ ವ್ಯಕ್ತಿ ಏಕಾಏಕಿ ಎದೆಗೆ ಚಾಕುವನ್ನು ಇರಿದಿದ್ದಾನೆ.
ಬಸ್ಸು ಪಂಡಿತ ಸಾರ್ವಜನಿಕ ಆಸ್ಪತ್ರೆ ಬಳಿ ತಲುಪಿದಾಗಲೇ ಈ ಕೃತ್ಯ ಎಸಗಿದ್ದು, ಪ್ರಯಾಣಿಕ ಗಂಗಾಧರ್ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಶಹರ ಠಾಣೆಯ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಕೃತ್ಯಕ್ಕೆ ಕಾರಣ ಏನೆಂಬುದು ತಿಳಿದಿಲ್ಲವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.