ದಾವಣಗೆರೆ ಜು.28 : 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-2 ಎಮ್.ಸಿ.ಸಿ.ಬಿ 11ಕೆ.ವಿ. ಫೀಡರ್ನಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುತ್ತಾರೆ.
ಆದ್ದರಿಂದ ಜು.29 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಮ್.ಸಿ.ಸಿ.ಬಿ ಎಪ್2 ಫೀಡರ್ ವ್ಯಾಪ್ತಿಯಲ್ಲಿ ಎಸ್. ಎಸ್ ಲೇಔಟ್ ಎ ಬ್ಲಾಕ್, ಕುವೆಂಪು ನಗರ, ಎಮ್ ಸಿ ಸಿ ಬಿ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಶಾಮನೂರರೋಡ್, ಎಸ್.ಎಸ್ ಮಹಲ್, ಮಾವಿನತೋಪ್, ಬಿಐಇಟಿಕಾಲೇಜ್, ಗ್ಲಾಸ್ಹೌಸ್ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.