ಮಡಿಕೇರಿ: ತಾನು ಪುಸ್ತಕ ತರುತ್ತೇನೆ ಎಂದು ಹೇಳಿ ತರಗತಿಯಿಂದ ಹೊರಟಿದ್ದ ನವೋದಯ ಶಾಲೆಯ ಎರಡನೇ ಪಿಯುಸಿ ವಿದ್ಯಾರ್ಥಿ ಏಕಾಏಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಮಿತ್ (17) ಆತ್ಮಹತ್ಯೆ ಮಾಡಿಕೊಂಡ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಫೆಬ್ರವರಿ 11ರ ಬೆಳಿಗ್ಗೆ ಇಂಗ್ಲಿಷ್ ಪುಸ್ತಕವೊಂದನ್ನು ತರುವುದಾಗಿ ಹೇಳಿ ತರಗತಿಯಿಂದ ಹೊರಬಂದ ವಿದ್ಯಾರ್ಥಿ ನಾಪತ್ತೆಯಾಗಿದ್ದನು. ನಿನ್ನೆ, ಕೂಟುಪೊಳೆ ಬಳಿ ಅಮಿತ್ ನ ಚಪ್ಪಲಿಗಳು ಕಂಡುಬಂದಿವೆ. ಇಂದು, ವಿದ್ಯಾರ್ಥಿಯ ಶವವು ಕೂಟುಪೊಳೆ ನದಿಯಲ್ಲಿ ಪತ್ತೆಯಾಗಿದೆ.
ವಿದ್ಯಾರ್ಥಿ ಅಮಿತ್ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ವಿದ್ಯಾರ್ಥಿಯ ಆತುರದ ನಿರ್ಧಾರಕ್ಕೆ ಕಾರಣ ತಿಳಿದಿಲ್ಲ. ಮಡಿಕೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.