ಮಡಿಕೇರಿ: 14 ದಿನಗಳ ಮಗುವನ್ನು ಬಿಟ್ಟು ಬಾಣಂತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಕಾವೇರಮ್ಮ ಎಂದು ಗುರುತಿಸಲಾಗಿದೆ. ದಿನೇಶ್ ಮತ್ತು ಕಾವೇರಮ್ಮ ಮದುವೆಯಾಗಿ ಸುಮಾರು 4 ವರ್ಷ ಕಳೆದಿದೆ.
ಕೊಟ್ಟೋಳಿಯ ನಿವಾಸಿಗಳಾದ ದಿನೇಶ್ ಮತ್ತು ಕಾವೇರಮ್ಮ ಮದುವೆಯಾಗಿ ಕೇವಲ ನಾಲ್ಕು ವರ್ಷಗಳು ಕಳೆದಿದ್ದವು. ಪತಿ ಮತ್ತು ಅತ್ತೆ ಮನೆಯಲ್ಲಿ ಇಲ್ಲದಿದ್ದಾಗ ಕಾವೇರಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿರಾಜಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.