ವಿಜಯನಗರ ಜಿಲ್ಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನ; ಯುವಕರು ದೇಶ ಪ್ರೇಮ ಬೆಳೆಸಿಕೊಳ್ಳಬೇಕು: ಸಚಿವ ಆನಂದ್ ಸಿಂಗ್

ಹೊಸಪೇಟೆ(ವಿಜಯನಗರ ಜಿಲ್ಲೆ): ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ವಿಜಯನಗರ ಜಿಲ್ಲಾಡಳಿತದ ವತಿಯಿಂದ ಹೊಸಪೇಟೆ ನಗರದಲ್ಲಿ ಶನಿವಾರ ಬೃಹತ್ ಜಾಥಾ ನಡೆಯಿತು. ಜಾಥಾವು ಹೊಸಪೇಟೆ ನಗರಸಭೆಯಿಂದ ಆರಂಭವಾಗಿ…

Anand Singh vijayaprabha news

ಹೊಸಪೇಟೆ(ವಿಜಯನಗರ ಜಿಲ್ಲೆ): ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ವಿಜಯನಗರ ಜಿಲ್ಲಾಡಳಿತದ ವತಿಯಿಂದ ಹೊಸಪೇಟೆ ನಗರದಲ್ಲಿ ಶನಿವಾರ ಬೃಹತ್ ಜಾಥಾ ನಡೆಯಿತು.

ಜಾಥಾವು ಹೊಸಪೇಟೆ ನಗರಸಭೆಯಿಂದ ಆರಂಭವಾಗಿ ಅಪ್ಪುಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಿತು. ಜಾಥಾ ಉದ್ದಕ್ಕೂ ದೇಶಭಕ್ತಿ ಘೋಷಣೆಗಳು ಮೊಳಗಿದವು. ಸಾರ್ವಜನಿಕರು ಹಾಗೂ ಸರಕಾರಿ ನೌಕರರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಸಾಗಿದರು.

ಬೃಹತ್ ಜಾಥಾಗೆ ಚಾಲನೆ ನೀಡಿದ ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದಸಿಂಗ್ ಅವರು ನಂತರ ಅವರು ಮಾತನಾಡಿ ಇದು ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ ಎಂದರು, ವಿಜಯನಗರ ಜಿಲ್ಲೆ ಉದಯವಾದ ನಂತರ ಬಹಳಷ್ಟು ಅಭಿವೃದ್ದಿ ಕಡೆ ನಡೆಯುತ್ತಿದೆ. ಇದರ ಜೊತೆಗೆ ಹೆಮ್ಮೆ ಪಡುವಂತಹದ್ದು ನಮ್ಮ ದೇಶದಲ್ಲಿ ಅತೀ ದೊಡ್ಡ ಧ್ವಜ ಸ್ಥಂಭವನ್ನು ನಮ್ಮ ವಿಜಯನಗರದಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.

Vijayaprabha Mobile App free

ಸ್ವಾತಂತ್ರಕ್ಕಾಗಿ ಮಹಾನ್ ವ್ಯಕ್ತಿಗಳು ತಮ್ಮ ಪ್ರಾಣವನ್ನು ಒತ್ತಿ ಇಟ್ಟು ಹೋರಾಡಿ ವೀರ ಮರಣವನ್ನು ಹೊಂದಿ ಸ್ವಾತಂತ್ರವನ್ನು ತಂದು ಕೊಟ್ಟಿದ್ದಾರೆ, ಅಂತಹ ಮಹನೀಯರನ್ನು ನೆನಪಿಸಿಕೊಳ್ಳುವ ಸುದಿನ ಎಂದರು.

ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಭೋಸ್, ಸರ್ದಾರ್ ವಲ್ಲಭಾಯಿ ಪಟೇಲ್, ಜವಹರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರೀ, ದಾದಾಬಾಯಿ ನವರೋಜಿ, ಭಗತ್ ಸಿಂಗ್, ಬಿಪಿ ಚಂದ್ರಪಾಲ್, ಲಾಲ್ ಲಜಪತ್ ರಾಯ್, ಬಾಲಗಂಗಾಧರ್ ತಿಲಕ್ ಹಾಗೂ ಇನ್ನೂ ಹಲವಾರು ಮಹಾನೀಯರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನಮಗೆ ಸ್ವಾತಂತ್ರವನ್ನು ತಂದು ಕೊಟ್ಟು ಇಂದಿಗೆ 75ವರ್ಷವಾಗಿದೆ ನಾವೆಲ್ಲರು ಆ ಸ್ವಾತಂತ್ರದ ಫಲಾನುಭವಿಗಳು ಎಂದರು.

ಫೆಬ್ರವರಿ 14ರಂದು ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ ಗುರು ಅವರನ್ನು ಬಿಟ್ರಿಷರು ಗಲ್ಲಿಗೆ ಹೇರಿಸಿದ ದಿನವನ್ನು ನಾವೆಲ್ಲಾರು (ಫೆಬ್ರವರಿ 14ರಂದು) ಪ್ರೆಮಿಗಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ ಇದು ನಮ್ಮ ದುರ್ದೈವ.

ಇಡೀ ವಿಶ್ವದಲ್ಲೆ ಅತೀ ಹೆಚ್ಚು ಯುವಕರು ಇರುವ ದೇಶ ಭಾರತ ದೇಶ, ಚೈನಾ, ಅಮೇರಿಕಾ, ಇಂಡೋನೇಷಿಯಾ ಹೀಗೆ ಹತ್ತು ದೇಶಗಳಲ್ಲಿ ನಮ್ಮ ಭಾರತ ದೇಶವು ಮೊದಲನೇ ಸ್ಥಾನದಲ್ಲಿದೆ ಆದರೆ ಯುವಕರು ದೇಶದ ಬಗ್ಗೆ ಆಲೋಚನೆ ಮಾಡದೆ ಹೋದರೆ ನಾವು ದೇಶದ ಮೊದಲನೇ ಸ್ಥಾನದಲ್ಲಿ ಬರೋದು ಕಷ್ಟವಾಗಬಹುದು, ಸ್ವಾತಂತ್ರ ದಿವಸದಂದು ನಾವು ರಾಷ್ಟ್ರ ಧ್ವಜಗಳನ್ನು ಹಾರಿಸಿ ಸಂತೋಷವನ್ನು ವ್ಯಕ್ತಪಡಿಸುವುದರ ಜೊತೆಗೆ ದೇಶಭಕ್ತಿಯನ್ನು ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಪಿ.ಶ್ರವಣ್, ಜಿಪಂ ಸಿಇಒ ಬೋಯರ್ ಹರ್ಷಲ್ ನಾರಾಯಣ್‍ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ, ಸಹಾಯಕ ಆಯುಕ್ತರಾದ ಸಿದ್ದರಾಮೇಶ್ವರ, ತಹಶೀಲ್ದಾರ ವಿಶ್ವಜೀತ್ ಮೆಹತಾ, ನಗರಸಭೆಯ ಅಧ್ಯಕ್ಷೆ ಸುಂಕಮ್ಮ, ನಗರಸಭೆಯ ಸದಸ್ಯರು ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.