ಕಾರವಾರ: ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡ ಉಂಟಾದ ಘಟನೆ ಸೋಮವಾರ ನಗರದ ಪಿಕಳೆ ರಸ್ತೆಯಲ್ಲಿನ ಚಾರುಮತಿ ವೆಲ್ ವುಮೆನ್ ಕ್ಲಿನಿಕ್‌ನಲ್ಲಿ ನಡೆದಿದೆ.
ಡಾ. ವೈಜಯಂತಿ ಎಚ್. ಅವರಿಗೆ ಸೇರಿದ ಕ್ಲಿನಿಕ್ ಇದಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಕ್ಲಿನಿಕ್‌ನಲ್ಲಿದ್ದ ಫ್ರಿಡ್ಜ್ ಸೇರಿದಂತೆ ಇನ್ನಿತರೆ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಕ್ಲಿನಿಕ್‌ನಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಉಂಟಾದ ಹಿನ್ನೆಲೆಯಲ್ಲಿ ಕ್ಲಿನಿಕ್‌ನ ಒಳಗಿನ ಕೋಣೆ ಸಂಪೂರ್ಣ ದಟ್ಟವಾದ ಹೊಗೆಯಿಂದ ತುಂಬಿಕೊಂಡಿದ್ದರಿಂದ ಕ್ಷೀಪ್ರ ಕಾರ್ಯಾಚರಣೆಗೂ ತೊಡಕಾಗಿತ್ತು.
ಸ್ಮೋಕ್ ಎಕ್ಸಾಸ್ಟಿಂಗ್ ಫ್ಯಾನ್ ನಿಂದ ಹೊಗೆ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದ ಅಗ್ನಿಶಾಮಕ ಸಿಬ್ಬಂದಿ ಬಳಿಕ ವಾಟರ್ ಪೈರ್ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.