ಜೋಯಿಡಾ: ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಅಬಕಾರಿ ಪೋಲಿಸರು ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ಲಾರಿ ಮತ್ತು ವ್ಯಕ್ತಿಯನ್ನು ಸೆರೆ ಹಿಡಿದ ಘಟನೆ ಬುಧವಾರ ಬೆಳಿಗಿನ ಜಾವ ನಡೆದಿದೆ.
ಈಚರ್ ಪ್ರೋ ಲಾರಿ ನೊಂದಣಿ ಸಂಖ್ಯೆ ಎಮ್.ಎಚ್-40-G-5878 ನ್ನು ತಪಾಸಣೆ ಮಾಡಿದಾಗ ,ಅದರ ಕ್ಯಾಬಿನ್ ಹಿಂಭಾಗದಲ್ಲಿ ಅಕ್ರಮವಾಗಿ ಕಂಪಾರ್ಟಮೆಂಟ್ ನಿರ್ಮಾಣ ಮಾಡಿ 7 ರಟ್ಟಿನ ಪೆಟ್ಟಿಗೆಗಳಲ್ಲಿ ಅಕ್ರಮವಾಗಿ ಸರಾಯಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಬಾಲಾಜಿ ಗೋವಿಂದ ಚವ್ಹಾಣ ದಾನೆಗಾಂವ, ತಾಲೂಕು ಅಹ್ಮದ್ ಪುರ ಜಿಲ್ಲೆ ಲಾತೂರ್, ಮಹಾರಾಷ್ಟ್ರ ಈತನನ್ನು ಬಂಧಿಸಲಾಗಿದೆ. ಜಪ್ತುಪಡಿಸಿದ ವಾಹನದ ಅಂದಾಜು ಬೆಲೆ ರೂ.15 ಲಕ್ಷ ಗಳಾಗಿದ್ದು, ಮದ್ಯದ ಅಂದಾಜು ಬೆಲೆ ರೂ.32,500/-ಗಳಾಗಿರುತ್ತವೆ.
ಅಬಕಾರಿ ಜಂಟಿ- ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಮಂಗಳೂರು ರವರ ನಿರ್ದೇಶನ ಮತ್ತು ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ, ರವರ ಮಾರ್ಗದರ್ಶನ ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಯಲ್ಲಾಪುರ ರವರ ಸೂಚನೆಯ ಮೇರೆಗೆ ಈ ಕಾರ್ಯಾಚರಣೆಯಲ್ಲಿ ಅಬಕಾರಿ ಸಿಪಿಐ ಟಿ.ಬಿ.ಮಲ್ಲಣ್ಣನವರ,ಸಿಬ್ಬಂದಿಗಳಾದ ಸಂತೋಷ ಸುಬ್ಬಣ್ಣನವರ್, ಸದಾಶಿವ ರಾಥೋಡ ಪ್ರವೀಣ ಬರಗಾಲಿ, ಎಸ್ ಬಿ ಬನಸೋಡೆ ಈರಣ್ಣ ಕುರುಬೇಟ್ ಕಾರ್ಯಾಚರಣೆಯಲ್ಲಿ ಇದ್ದರು.