ದಾವಣಗೆರೆ: ಜಿಲ್ಲೆಯ ಅತಿ ಸಣ್ಣ ಕುಶಲಕರ್ಮಿಗಳಿಗೆ 50000 ದವರೆಗೆ ಸಾಲ ಸೌಲಭ್ಯ; ನೀವೂ ಅರ್ಜಿ ಸಲ್ಲಿಸಿ

ದಾವಣಗೆರೆ: ಜಿಲ್ಲೆಯ ಅತಿ ಸಣ್ಣ ವೃತ್ತಿಪರ ಕುಶಲಕರ್ಮಿಗಳಿಗಾಗಿ ಸಾಲ-ಸಹಾಯಧನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಕುಶಲಕರ್ಮಿಗಳು ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಂಡು ತಮ್ಮ ವೃತ್ತಿ/ಚಟುವಟಿಕೆಯನ್ನು ಮುಂದುವರೆಸಲು ವಾಣಿಜ್ಯ ಬ್ಯಾಂಕ್‍ಗಳು/ಸಹಕಾರ ಬ್ಯಾಂಕ್/ಪ್ರಾದೇಶಿಕ ಗ್ರಾಮೀಣ ಬಾಂಕ್ ರೂ.50000/-ಗಳವರೆಗೆ ಸಾಲ ಸೌಲಭ್ಯ…

loan vijayaprabha news

ದಾವಣಗೆರೆ: ಜಿಲ್ಲೆಯ ಅತಿ ಸಣ್ಣ ವೃತ್ತಿಪರ ಕುಶಲಕರ್ಮಿಗಳಿಗಾಗಿ ಸಾಲ-ಸಹಾಯಧನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಕುಶಲಕರ್ಮಿಗಳು ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಂಡು ತಮ್ಮ ವೃತ್ತಿ/ಚಟುವಟಿಕೆಯನ್ನು ಮುಂದುವರೆಸಲು ವಾಣಿಜ್ಯ ಬ್ಯಾಂಕ್‍ಗಳು/ಸಹಕಾರ ಬ್ಯಾಂಕ್/ಪ್ರಾದೇಶಿಕ ಗ್ರಾಮೀಣ ಬಾಂಕ್ ರೂ.50000/-ಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು.

ಕಮ್ಮಾರಿಕೆ/ಬುಟ್ಟಿ ಹಣಿಯುವುದು/ಬಡಗಿತನ/ಗೋಲ್ಡ್ ಸ್ಮಿತ್(ಆಭರಣ ತಯಾರಿಕೆ)/ಕಲ್ಲಿನ ಕೆತ್ತನೆ/ಮರದ ಕೆತ್ತನೆ/ಕುಂಬಾರಿಕೆ/ಮಣ್ಣಿನ ವಿಗ್ರಹ ತಯಾರಿಕೆ/ಲೋಹದ ಕರಕುಶಲ/ಬೆತ್ತ ಮತ್ತು ಬಿದಿರು ಉತ್ಪನ್ನ ವಸ್ತುಗಳು/ಲಂಬಾಣಿ ಕಸೂತಿ/ಕಸೂತಿ/ಕಂಬಳಿ ನೇಯುವುದು/ಚಾಪೆ ಹಣೆಯುವುದು ವೃತ್ತಿಪರ ಕುಶಲಕರ್ಮಿಗಳಿಗೆ ಗರಿಷ್ಠ ರೂ.15000/- ಸಹಾಯಧನ ಸಾಲದ ಖಾತೆಗೆ ಜಮಾ ಮಾಡಲಾಗುವುದು.

ಅರ್ಜಿದಾರರು 18 ವರ್ಷ ವಯೋಮಾನದ ಮೇಲ್ಪಟ್ಟ ವೃತ್ತಿಪರ ಕುಶಲಕರ್ಮಿಗಳು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜ.25 ರೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.