ಹೊನ್ನಾವರ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಲೆಗಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದ ಮೂವರು ಪ್ರವಾಸಿಗರನ್ನು ಕರ್ತವ್ಯನಿರತ ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ತಾಲ್ಲೂಕಿನ ಕಾಸರಕೋಡದ ಇಕೋ ಬೀಚ್‌ನಲ್ಲಿ ನಡೆದಿದೆ.
ರಕ್ಷಣೆಗೊಳಗಾದ ಪ್ರವಾಸಿಗರನ್ನು ಸ್ವಾತಿ(24), ಚೇತಾಲಿ(21) ಹಾಗೂ ಸೃಷ್ಟಿ ಎಂದು ಗುರುತಿಸಲಾಗಿದ್ದು, ಹುಬ್ಬಳ್ಳಿ ಮೂಲದವರೆಂದು ತಿಳಿದುಬಂದಿದೆ. ಐದು ಮಂದಿಯ ತಂಡ ಹುಬ್ಬಳ್ಳಿಯಿಂದ ಹೊನ್ನಾವರ ಪ್ರವಾಸಕ್ಕೆಂದು ಆಗಮಿಸಿದ್ದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಇಜಾಡಲು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಮುಂದೆ ಹೋಗಿದ್ದು ರಕ್ಷಣೆಗಾಗಿ ಕೂಗಿಕೊಂಡಿದ್ದರು.
ಕೂಡಲೇ ಮುಳುಗುತ್ತಿದ್ದವರನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ಶಶಾಂಕ ಅಂಬಿಗ, ಮಹೇಶ ಹರಿಕಂತ್ರ, ಯೋಗೇಶ ಅಂಬಿಗ ಮೂವರೂ ಪ್ರವಾಸಿಗರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಅದೃಷ್ಟವಶಾತ್ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದು ಲೈಫ್‌ಗಾರ್ಡ್ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment