ಬಸ್‌ನಲ್ಲಿ ಸಿಕ್ಕ ಪರ್ಸ್‌ನ್ನು ಶಿಕ್ಷಕಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

ಶಿರಸಿ: ಶಿರಸಿಯ ಗೋಳಿಮಕ್ಕಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನದ ಬ್ರೆಸ್‌ಲೈಟ್, ನಗದು ಹಾಗೂ ಅಮೂಲ್ಯವಾದ ದಾಖಲೆಗಳಿದ್ದ ಪರ್ಸ್‌ನ್ನು ತಾಲ್ಲೂಕಿನ ನೆಲಮಾವು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಿರಸಿಯ ಅನಿತಾ ಡಿಸಿಲ್ವ ಆಕಸ್ಮಿಕವಾಗಿ ಕಳೆದುಕೊಂಡಿದ್ದರು.  ಬಸ್‌ನಲ್ಲಿ ಬಿದ್ದಿದ್ದ…

ಶಿರಸಿ: ಶಿರಸಿಯ ಗೋಳಿಮಕ್ಕಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನದ ಬ್ರೆಸ್‌ಲೈಟ್, ನಗದು ಹಾಗೂ ಅಮೂಲ್ಯವಾದ ದಾಖಲೆಗಳಿದ್ದ ಪರ್ಸ್‌ನ್ನು ತಾಲ್ಲೂಕಿನ ನೆಲಮಾವು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಿರಸಿಯ ಅನಿತಾ ಡಿಸಿಲ್ವ ಆಕಸ್ಮಿಕವಾಗಿ ಕಳೆದುಕೊಂಡಿದ್ದರು. 

ಬಸ್‌ನಲ್ಲಿ ಬಿದ್ದಿದ್ದ ಪರ್ಸನ್ನು ಕರ್ತವ್ಯದಲ್ಲಿದ್ದ ಬಸ್‌ನ ನಿರ್ವಾಹಕರಾದ ರವೀಂದ್ರ ದೊಡ್ಡಮನೆ ಪತ್ತೆಮಾಡಿದ್ದು, ಅದನ್ನು ಜೋಪಾನವಾಗಿರಿಸಿಕೊಂಡು ಸಂಜೆ ಕರ್ತವ್ಯ ಮುಗಿಸಿ ಬಂದು ಶಿಕ್ಷಕಿಗೆ ಬಸ್ ನಿಲ್ದಾಣದಲ್ಲಿಯೇ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಳೆದುಕೊಂಡ ಪರ್ಸನ್ನು ಮರಳಿ ಪಡೆದ ಶಿಕ್ಷಕಿ ಅನಿತಾ ಸಾರಿಗೆ ಸಂಸ್ಥೆಯ ಈ ನಿರ್ವಾಹಕರ ಪ್ರಾಮಾಣಿಕತೆಗೆ ಅಭಿನಂದಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.