ಹೊಸಪೇಟೆ: ಬಿಡಾಡಿ ದನಗಳನ್ನು ತಮ್ಮ ಮನೆಯಲ್ಲಿ ಕಟ್ಟಿಕೊಳ್ಳದಿದ್ದಲ್ಲಿ ಗೋಶಾಲೆಗೆ ರವಾನಿಸಲು ಕ್ರಮ; ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ

ಹೊಸಪೇಟೆ(ವಿಜಯನಗರ),ಜು.27: ಹೊಸಪೇಟೆ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ನಗರಸಭೆ ಕಾರ್ಯಾಲಯಕ್ಕೆ ಹಲವಾರು ದೂರುಗಳು ಹಾಗೂ ಮೌಖಿಕವಾಗಿ ಅನೇಕ ಮನವಿಗಳು ಸಲ್ಲಿಕೆಯಾಗಿವೆ.…

Cattle vijayaprabha news

ಹೊಸಪೇಟೆ(ವಿಜಯನಗರ),ಜು.27: ಹೊಸಪೇಟೆ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ನಗರಸಭೆ ಕಾರ್ಯಾಲಯಕ್ಕೆ ಹಲವಾರು ದೂರುಗಳು ಹಾಗೂ ಮೌಖಿಕವಾಗಿ ಅನೇಕ ಮನವಿಗಳು ಸಲ್ಲಿಕೆಯಾಗಿವೆ.

ಈ ಹಿನ್ನೆಲೆ ಮತ್ತು ಬಿಡಾಡಿ ದನಗಳ ಹಾವಳಿಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಜು.30ರೊಳಗಾಗಿ ಬಿಡಾಡಿ ದನಗಳ ಮಾಲೀಕರು ತಮ್ಮ ತಮ್ಮ ನಿವಾಸ ಸ್ಥಳಗಳಲ್ಲಿಯೇ ಬಿಡಾಡಿ ದನಗಳನ್ನು ಕಟ್ಟಿಕೊಳ್ಳಬೇಕು ಎಂದು ಹೊಸಪೇಟೆ ನಗರಸಭೆಯ ಪೌರಾಯುಕ್ತರಾದ ಮನೋಹರ್ ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು.30ರ ನಂತರ ಬಿಡಾಡಿ ದನಗಳನ್ನು ತಮ್ಮ ತಮ್ಮ ನಿವಾಸ ಸ್ಥಳಗಳಲ್ಲಿ ಕಟ್ಟಿಕೊಳ್ಳದಿದ್ದಲ್ಲಿ ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸಲು ಕ್ರಮಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.