ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಪಾಲಕರ ಮಾತಿಗೆ ಸಿಟ್ಟಾಗುವುದು, ಜಗಳವಾಡುವುದು ಬಹುತೇಕ ಸಾಮಾನ್ಯ ಎನ್ನುವಂತಾಗಿದೆ. ಅದರಲ್ಲೂ ಏನಾದರೂ ಮಾಡಬೇಡ ಎಂದು ಅಡ್ಡಹಾಕಿದರಂತೂ ಜೀವಕ್ಕೇ ಕುತ್ತು ತಂದುಕೊಂಡ ಎಷ್ಟೋ ಘಟನೆಗಳು ನಡೆದಿವೆ. ಇಂತಹದ್ದೇ ಒಂದು ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಸೂಳೆಬೈಲ್ ಗ್ರಾಮದಲ್ಲಿ ರಿಮೋಟ್ ಕೊಡಲಿಲ್ಲ ಎನ್ನುವ ಕಾಣಕ್ಕೆ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ನಡೆದಿದೆ. ಸಹನಾ(16) ಮೃತ ದುರ್ದೈವಿ ಬಾಲಕಿಯಾಗಿದ್ದಾಳೆ.
ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಮಕ್ಕಳ ನಡುವೆ ರಿಮೋಟ್‌ಗಾಗಿ ಜಗಳ ನಡೆದಿದ್ದು, ಮಕ್ಕಳು ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಅಜ್ಜಿ ಮೊಮ್ಮಗಳಿಗೆ ಬೈದಿದ್ದು ರಿಮೋಟ್ ತೆಗೆದುಕೊಂಡಿದ್ದಾರೆ. ಇದರಿಂದ ಮನನೊಂದ ಬಾಲಕಿ ಸಹನಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.