ಹರಪನಹಳ್ಳಿ : ತಾಲೂಕಿನ ಅರಸೀಕೆರೆ ಹೋಬಳಿ ಕೇಂದ್ರದಲ್ಲಿ ರಾಗಿ ಖರೀದಿ ಕೇಂದ್ರ ಸ್ಥಾಪಿಸುವಂತೆ ರೈತ ಸಂಘಟನೆ ಕಾರ್ಯಕರ್ತರು ಸೋಮವಾರ ಬಳ್ಳಾರಿ ಸಂಸದರಾದ ವೈ. ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಹರಪನಹಳ್ಳಿ ತಾಲೂಕಿನಲ್ಲಿಯೇ ದೊಡ್ಡ ಹೋಬಳಿ ಕೇಂದ್ರವಾಗಿರುವ ಅರಸೀಕೆರೆ ಭಾಗದಲ್ಲಿ ಮೆಕ್ಕೆಜೋಳ ಹೊರತು ಪಡಿಸಿದರೆ ರಾಗಿ ಬೆಳೆಯನ್ನೇ ಅತಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಬೆಳೆದಿರುವ ರಾಗಿಯನ್ನು ಮಾರಾಟ ಮಾಡಲು ದೂರದ ಹರಪನಹಳ್ಳಿಗೆ ತೆರಳುವುದು ರೈತರಿಗೆ ಆರ್ಥಿಕ ಹೊರೆ ಉಂಟುಮಾಡುವುದರಿಂದ ಗ್ರಾಮದಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು,ಕಳೆದ ವರ್ಷ ರಾಗಿ ಖರೀದಿ ಕೇಂದ್ರ ಸ್ಥಾಪಿಸಿದ್ದರಿಂದ ನೂರಾರು ಮಂದಿ ರೈತರಿಗೆ ಸಹಕಾರಿಯಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಖರೀದಿ ಕೇಂದ್ರ ಇನ್ನೂ ಆರಂಭವಾಗಿಲ್ಲ. ಗ್ರಾಮದಲ್ಲಿ ಖರೀದಿ ಕೇಂದ್ರ ಸ್ಥಾಪನೆಯ ಭರವಸೆಯೂ ಇಲ್ಲ. ಹಾಗಾಗಿ ಕೂಡಲೇ ಖರೀದಿ ಕೇಂದ್ರಕ್ಕೆ ಕ್ರಮ ಕೈಗೊಳ್ಳುವಂತೆ ರೈತ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.