ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ತಾಲ್ಲೂಕಿನಲ್ಲಿ ಅಂದಾಜು 8 ಕೋಟಿ ರೂಪಾಯಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಸದರಾದ ಜಿಎಂ ಸಿದ್ದೇಶ್ವರ್ ಅವರು ಶಂಕು ಸ್ಥಾಪನೆ ನೆರೆವೇರಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ತಾಲ್ಲೂಕಿನ ಚಿಕ್ಕಮೇಗಳಗೆರೆ ಗ್ರಾಮದಿಂದ ವಡ್ಡಿನಹಳ್ಳಿ ಗ್ರಾಮದವರೆಗೆ 4.34 ಕಿ. ಮೀ. ಅಂದಾಜು ಮೊತ್ತ 5 ಕೋಟಿ ರೂ ಹಾಗೂ ಹಿರೇಮೇಗಳಗೆರೆಯಿಂದ ಶ್ರೀಕಂಠಾಪುರ ಗ್ರಾಮದ ವರೆಗೆ 2.80 ಕಿ.ಮೀ ಅಂದಾಜು 3.00 ಕೋಟಿ ರೂ ಮೊತ್ತದಲ್ಲಿ ಸಿ.ಸಿ ರಸ್ತೆ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ಜಿಎಂ ಸಿದ್ದೇಶ್ವರ್, ಹರಪನಹಳ್ಳಿ ತಾಲೂಕಿನ ಶಾಸಕ ಜಿ ಕರುಣಾಕರರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು




