ಹರಪನಹಳ್ಳಿ ಟಿಕೆಟ್‌ಗಾಗಿ ಫೈಟ್: ವೀಣಾ ಮಹಾಂತೇಶ್ ಗೆ ಟಿಕೆಟ್ ನೀಡಲು ಆಗ್ರಹ; ಪ್ರಬಲ ಆಕಾಂಕ್ಷಿಯಾಗಿ ಏನ್ ಕೊಟ್ರೇಶ್

ಹರಪನಹಳ್ಳಿ: ವಿಧಾನಸಭೆ ಎಲೆಕ್ಷನ್‌ಗೆ ರಾಜ್ಯದಲ್ಲಿ ಟಿಕೆಟ್‌ಗಾಗಿ ಭರ್ಜರಿ ಪೈಪೋಟಿ ನಡೆಯುತ್ತಿದೆ. ಇದೀಗ ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಡಿಸಿಎಂ ಪುತ್ರಿಯರಿಬ್ಬರು ಫೈಟ್ ಮಾಡುತ್ತಿದ್ದು, ಮಾಜಿ ಉಪಮುಖ್ಯಮಂತ್ರಿ ಎಂ.ಪಿ ಪ್ರಕಾಶ್…

Veena Mahantesh, N Kotresh and M P Latha

ಹರಪನಹಳ್ಳಿ: ವಿಧಾನಸಭೆ ಎಲೆಕ್ಷನ್‌ಗೆ ರಾಜ್ಯದಲ್ಲಿ ಟಿಕೆಟ್‌ಗಾಗಿ ಭರ್ಜರಿ ಪೈಪೋಟಿ ನಡೆಯುತ್ತಿದೆ. ಇದೀಗ ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಡಿಸಿಎಂ ಪುತ್ರಿಯರಿಬ್ಬರು ಫೈಟ್ ಮಾಡುತ್ತಿದ್ದು, ಮಾಜಿ ಉಪಮುಖ್ಯಮಂತ್ರಿ ಎಂ.ಪಿ ಪ್ರಕಾಶ್ ಪುತ್ರಿ ವೀಣಾ ಮತ್ತು ಲತಾ ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಜಿದ್ದಾಜಿದ್ದಿ ನಡೆಸಿದ್ದಾರೆ.

ವೀಣಾ ಮಹಾಂತೇಶ್ ಅವರಿಗೆ ಟಿಕೆಟ್ ನೀಡಲು ಆಗ್ರಹ:

Vijayaprabha Mobile App free

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜನರು ಪಕ್ಷವನ್ನು ಕಾಂಗ್ರೆಸ್ ಅಧಿಕಾರಕ್ಕೆ ತರಬೇಕೆಂದು ಕಾತುರದಿಂದ ಕಾಯುತ್ತಿದ್ದೇವೆ. ಪಕ್ಷದಿಂದ ಅನೇಕ ಆಕಾಂಕ್ಷೆಗಳಿದ್ದು ಆದರೆ ಕ್ಷೇತ್ರದಲ್ಲಿ ನಿರಂತರವಾಗಿ ಬಡವರ , ವಿದ್ಯಾರ್ಥಿಗಳ , ಶೋಷಿತರ , ರೈತರ , ಕೂಲಿ ರೈತರ , ಕೂಲಿ ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಾ ಅನೇಕ ಸಮಾಜಮುಖಿ ಕೆಲಸ ಕಾರ್ಯಗಳನ್ನು ಐದು ವರ್ಷಗಳಿಂದ ಬಂದಂತಹ ಜನನಾಯಕಿ ನಿರಂತರವಾಗಿ ಮಾಡುತ್ತಾ ಎಂ. ಪಿ. ವೀಣಕ್ಕೆ ಅವರಿಗೆ ಕಾಂಗ್ರೇಸ್ ಪಕ್ಷ ಟಿಕೇಟ್ ಕೊಡಬೇಕು.

ಇದನ್ನು ಓದಿ: ದಾವಣಗೆರೆ: ಬಿಜೆಪಿ ಶಾಸಕನಿಗೆ ಮತ್ತೊಂದು ಸಂಕಷ್ಟ..; ಅಜ್ಞಾತ ಸ್ಥಳದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ..!

ಜನರು ವೀಣಾ ಅಕ್ಕಾ ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಅಪಾರ ಮಹಿಳಾ ಶಕ್ತಿ ಹಾಗೂ ಯುವ ಒಳಗೊಂಡ ವೀಣಾ ಮಹಾಂತೇಶ್ ಅವರು ನೊಂದವರ ಆಶಾಕಿರಣದಂತೆ ಕಾರ್ಯನಿರ್ವಹಿಸುತಿದ್ದು ಅಧಿಕಾರಕ್ಕೆ ಹಾತೊರೆಯದೆ ಅಭಿವೃದ್ಧಿಯ ಮುಖಮಾಡಿ ನಿಂತಿರುವ ಇಂತಹ ನಾಯ ಕಿಗೆ ಸನ್ಮಾನ್ಯ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್‌ ಅವರು ಕಾಂಗ್ರೆಸ್ ಪಕ್ಷದ ಮುಖಂಡರು ವೀಣಕ್ಕೆ ಅವರ ಕೆಲಸ ಕಾರ್ಯಗಳನ್ನು ಗಮನಿಸಿ ವೀಣಾ ಮಹಾಂತೇಶ್ ಅವರಿಗೆ ಟಿಕೇಟ್ ನೀಡಬೇಕೆಂದು ಯುವ ಕಾಂಗ್ರೇಸ್ ವಿಜಯನಗರ ಜಿಲ್ಲಾ ಕಾರ್ಯದರ್ಶಿಯಾದ ಗಂಗಜ್ಜಿ ನಾಗರಾಜ್ ಹಾಗೂ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಯುವ ಒತ್ತಾಯ ಮಾಡಿದ್ದಾರೆ.

ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿ ಅರಸೀಕೆರೆಯ ಏನ್ ಕೊಟ್ರೇಶ್:

N Kotresh

ಇನ್ನು, ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಅರಸೀಕೆರೆ ಏನ್ ಕೊಟ್ರೇಶ್ ಅವರು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೌದು. ಕೊಟ್ರೇಶ್ ಅವರು ಕಾಂಗ್ರೆಸ್ ಪಕ್ಷದ ಸಂಘಟನಾ ದೃಷ್ಟಿಯಿಂದ ಇತ್ತೀಚಿಗೆ ಹರಪನಹಳ್ಳಿಯಲ್ಲಿ ಜನಸಂಪರ್ಕ ಕಚೇರಿ ತೆರೆದು ಕ್ಷೇತ್ರದ ಹಳ್ಳಿಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದು, ತೆರೆಮರೆಯಲ್ಲಿ ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ ಹೂವಿನ ಹಡಗಲಿ ಕ್ಷೇತ್ರದ ನಾಯಕರು:

Aigol Chidanand and Varada Gaus Moiddin

ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿ ಅನೇಕ ನಾಯಕರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಹೂವಿನ ಹಡಗಲಿ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ನ ಮೂರೂ ನಾಯಕರು ವೈಯಕ್ತಿಕ ಕಾರಣದಿಂದ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಇದರಲ್ಲಿ ಐಗೋಳ್ ಚಿದಾನಂದ್, ವಾರದ ಗೌಸ್ ಮೊಯಿದ್ದೀನ್ ಅವರು ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದು, ಕುತೂಹಲಕ್ಕೆ ಕಾರಣವಾಗಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಕಾದುನೋಡಬೇಕಿದೆ.

ಇದನ್ನು ಓದಿ: ಹೂವಿನಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ದಿಢೀರ್ ರಾಜೀನಾಮೆ; ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ..!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.