ದಾವಣಗೆರೆ: ಆಸ್ತಿ ವಿಚಾರವಾಗಿ ಸುಪಾರಿ ನೀಡಿ ಚಿಕ್ಕಪ್ಪನನ್ನೇ ಕೊಲೆ ಮಾಡಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಚನ್ನಗಿರಿಯಲ್ಲಿ ನಡೆದಿದೆ. ಸತೀಶ್ ಸುಪಾರಿ ನೀಡಿ ಕೊಲೆ ಮಾಡಿಸಿ ಆರೋಪಿಯಾಗಿದ್ದು ಸಿದ್ಧಲಿಂಗಪ್ಪ ಕೊಲೆಯಾದ ಚಿಕ್ಕಪ್ಪನಾಗಿದ್ದಾನೆ.
ತಾಲ್ಲೂಕಿನ ಗೋಪನಾಳ ಗ್ರಾಮದವನಾಗಿದ್ದ ಸಿದ್ಧಲಿಂಗಪ್ಪ ಬೋರ್ ಪಾಯಿಂಟ್ ಗುರುತಿಸುವ ಕೆಲಸ ಮಾಡುತ್ತಿದ್ದ. ಇವರ ಅಣ್ಣನ ಮಗ ಸತೀಶ್ ಹಾಗೂ ಈತನ ನಡುವೆ ಆಸ್ತಿ ಮತ್ತು ಜಾಗದ ವಿಚಾರವಾಗಿ ವ್ಯಾಜ್ಯವಿತ್ತು. ಬೋರ್ ಪಾಯಿಂಟ್ ಗುರುತಿಸುವ ನೆಪದಲ್ಲಿ ಕರೆಸಿಕೊಂಡು ಆತನನ್ನು ಹತ್ಯೆಗೈಯಲಾಗಿದ್ದು, ಆತನ ಚಿಕ್ಕಪ್ಪನ ಮಗನೇ ಹತ್ಯೆಗೆ 1 ಲಕ್ಷ ರೂಪಾಯಿ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ.
ಹತ್ಯೆ ಸಂಬಂಧ ದಾವಣಗೆರೆ ತಾಲೂಕಿನ ಗೋಪನಾಳ್ ಗ್ರಾಮದ ಸತೀಶ, ಪ್ರಭು ಅಲಿಯಾಸ್ ಮಾಸ್ತಿ, ಲಿಂಗದಹಳ್ಳಿ ಗ್ರಾಮದ ರಾಜಪ್ಪ, ದಾವಣಗೆರೆಯ ನಿಟುವಳ್ಳಿಯ ಪ್ರಶಾಂತ್ ನಾಯ್ಕ ಅಲಿಯಾಸ್ ಪಿಲ್ಲಿ ಸುಜಾತ ಸತೀಶ್ ಶಿವಮೂರ್ತೆಪ್ಪ ಎಂಬುವವರನ್ನು ಬಂಧಿಸಲಾಗಿದೆ.