AI photo : AI ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. AIಯೊಂದಿಗೆ ಎಷ್ಟು ಅನುಕೂಲಗಳಿವೆಯೋ, ಅಷ್ಟೇ ಅನಾನುಕೂಲಗಳೂ ಇವೆ. ಹಾಗಾಗಿ AI ಕುರಿತು ಮಾಹಿತಿ ಅತ್ಯಗತ್ಯ.
ಗೂಗಲ್‌ನಲ್ಲಿ ಫೋಟೋದ ರಿವರ್ಸ್ ಇಮೇಜ್ ಮಾಡುವ ಮೂಲಕ ಇದು AI ಫೋಟೋ/ಸಾಮಾನ್ಯ ಫೋಟೋ ಎಂಬುದನ್ನು ತಿಳಿದುಕೊಳ್ಳಬಹುದು. ಫೋಟೋ ಕಾಪಿ ಮಾಡಿ ಗೂಗಲ್ ಸರ್ಚ್’ನಲ್ಲಿ ಹಾಕುವ ಮೂಲಕ ಫೋಟೋದ ಮೂಲ ಕಂಡುಹಿಡಿಯಬಹುದು.
ಅಲ್ಲದೆ, ಗೂಗಲ್ ಲೆನ್ಸ್‌ನಲ್ಲಿ ಸ್ಕ್ಯಾನ್ ಮಾಡುವ ಮೂಲಕ, ಫೋಟೋದ ಹಿನ್ನಲೆ ತಿಳಿದು ಇದು ನಕಲಿಯೇ? ಎಂದು ಫೈಂಡ್ಔಟ್ ಮಾಡಬಹುದು.
ನೀವು ಯಾವುದೇ ವ್ಯಕ್ತಿಯ ಫೋಟೋವನ್ನು ನೋಡಿದರೆ, ಅವರ ಮುಖ & ಕೂದಲನ್ನು ಎಚ್ಚರಿಕೆಯಿಂದ ನೋಡಿ. ಅಲ್ಲಿ ವ್ಯತ್ಯಾಸ ಅರ್ಥವಾಗುವುದಲ್ಲದೆ, ನಿಮಗೆ ಫೋಟೋಗ್ರಫಿ ಬಗ್ಗೆ ಐಡಿಯಾ ಇದ್ದರೆ ಇದನ್ನು ಸುಲಭವಾಗಿ ಕಂಡುಹಿಡಿಯಬಹುದು.
ಹೇಗೆಂದರೆ ಫೋಟೋದ ನೆರಳುಗಳು ಮತ್ತು ಬೆಳಕನ್ನು ಎಚ್ಚರಿಕೆಯಿಂದ ನೋಡುವ ಮೂಲಕ ನೀವು AI ಫೋಟೋಗಳನ್ನು ಗುರುತಿಸಬಹುದು. ಗೂಗಲ್ AI ಟೂಲ್‌ಬಾರ್ ಕೂಡ ಇದನ್ನು ಹೇಳುತ್ತದೆ. ಗೂಗಲ್ ಚಾಟ್ ಬೋಟ್‌ನಲ್ಲಿ ಚಿತ್ರವನ್ನು ಅಪ್‌ಲೋಡ್ ಮಾಡುವ ಮೂಲಕವೂ ಫೋಟೋದ ನಿಜಾಂಶ ಕಂಡುಹಿಡಿಯಬಹುದು.