ದಾವಣಗೆರೆ ಆ.02: ದಾವಣಗೆರೆ ನಗರದ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿ.ಆರ್.ಸಿ) ವತಿಯಿಂದ ಕೇಂದ್ರ ಗೃಹ ಮಂತ್ರಾಲಯದ ಕಾರ್ಯಕ್ರಮ ಸೈಬರ್ ಕ್ರೈಮ್ ಬಗೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು, ಕೆ.ಬಿ ಬಡಾವಣೆಯ ಕಾವೇರಮ್ಮ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದು, ಬ್ಯಾಂಕ್ ಆಪ್ ಬರೋಡದ ಮುಖ್ಯ ವ್ಯವಸ್ಥಾಪಕರಾದ ಸಂಗೇಶ್ ಚವಾಣ್ ಇವರು ಸೈಬರ್ ಕ್ರೈಮ್ ಬಗೆಗೆ ಜಾಗೃತಿ ಮೂಡಿಸಲಿದ್ದಾರೆ.
ಸಿಆರ್‍ಸಿ ಕೇಂದ್ರವು ವಿಕಲಚೇತನರು ಹಾಗೂ ವಿಕಲಾಂಗರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ವರ್ಗದ ಜನರಿಗೂ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿ.ಆರ್.ಸಿ. ಕೇಂದ್ರದ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವ ರ್ಯಾಲಿ ಆಯೋಜಿಸಲಾಗಿದೆ ಎಂದು ಸಿಆರ್‍ಸಿ ಕೇಂದ್ರದ ಆಡಳಿತ ವಿಭಾಗದ ವೈ.ಶ್ರೀನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.