ದಾವಣಗೆರೆ ಸೆ.03: ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಾವಣಗೆರೆ ವತಿಯಿಂದ ಸೆ.04 ರಂದು ಸಂಜೆ 6 ಗಂಟೆಗೆ ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠ ಇಲ್ಲಿ ಸಾಂಸ್ಕøತಿಕ ಸೌರಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಷ.ಬ್ರ.ಡಾ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುವುದು. ಹೊನ್ನಾಳಿ ಪುರಸಭೆಯ ಅಧ್ಯಕ್ಷರಾದ ರಂಗನಾಥ ಟಿ.ಹೆಚ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹೊನ್ನಾಳಿ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯರಾದ ಎನ್.ಎಸ್ ರಾಜು, ಹೊನ್ನಾಳಿಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮುರುಗೆಪ್ಪ ಗೌಡ.ಜಿ, ಹೊನ್ನಾಳಿ ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ರಶ್ಮೀ.ಹೆಚ್.ಜೆ, ಆರಕ್ಷ ವೃತ್ತ ನರೀಕ್ಷಕರಾದ ಟಿ.ವಿ.ದೇವರಾಜ್ ಪಾಲ್ಗೊಳ್ಳವರು.
ದಾವಣಗೆರೆಯ ಶ್ರೀ ಗುರುರಾಜ್ ಬಾವಾಜಿ ಇವರಿಂದ ಹಿಂದೂಸ್ತಾನಿ ಸಂಗೀತ, ಹೊನ್ನಾಳಿಯ ಸಂತೃಪ್ತಿ ಅಂದರ ಸೇವಾ ಸಮಿತಿ ಸುಗಮ ಸಂಗೀತ, ಚನ್ನಗಿರಿ ಶ್ರೀ ಯುಗಧರ್ಮ ರಾಮಣ್ಣರಿಂದ ಜಾನಪದ ಗೀತೆಗಳು, ಹೊನ್ನಾಳಿಯ ಶ್ರೀರೂಪದರ್ಶಿ ಮಹಿಳಾ ಮಂಡಳಿಯಿಂದ ಸಮೂಹ ನೃತ್ಯ, ನ್ಯಾಮತಿಅರುಂಡಿ ಶ್ರೀ ವೀರಮದಕರಿ ಡೊಳ್ಳಿನ ಕುಣಿತ, ದಾವಣಗೆರೆ ಶ್ರೀ ಹೂವಣ್ಣ ಗೊಲ್ಲರಹಳ್ಳಿ ಇವರಿಂದ ಕೋಲಾಟ, ಜಗಳೂರು.ತಾ ಸಿದ್ದಮ್ಮನಹಳ್ಳಿ ಶ್ರೀ ರಂಗನಾಥ ಸ್ವಾಮಿ ಯಕ್ಷಗಾನ ಕಲಾವಿದರ ಸಂಘದಿಂದ ಮೂಡಲಪಾಯ, ಹರಿಹರದ ಶ್ರೀಮತಿ ಉಮಾ ಭಟ್ ಇವರಿಂದ ಗಮಕ ವಾಚನ, ಚನ್ನಗಿರಿ.ತಾ ಗೋಪ್ಪೆನಹಳ್ಳಿ ಶ್ರೀ ಉಮೇಶ್.ಎ.ಆರ್ ಇವರಿಂದ ವೀರಗಾಸೆ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.