ದಾವಣಗೆರೆ: ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ ಹೊಡೆದು ದಂಪತಿ ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಬಾವಿಯಾಳು ಗ್ರಾಮದಲ್ಲಿ ನಡೆದಿದೆ.
ಹೌದು, ಮನೆಗೆ ಹಾಕಿದ್ದ ವಿದ್ಯುತ್ ತಂತಿ ಗ್ರೌಂಡ್ ಆಗಿ ಘಟನೆ ಸಂಭವಿಸಿದ್ದು, ರವಿಶಂಕರ್ (40), ವೀಣಾ (28) ಮೃತ ದಂಪಯಾಗಿದ್ದಾರೆ. ಪತ್ನಿ ವೀಣಾ ಮನೆ ಪಕ್ಕದಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ತಂತಿಗೆ ಬಟ್ಟೆ ಒಣ ಹಾಕುತಿದ್ದರು. ಈ ವೇಳೆ ವಿದ್ಯುತ್ ತಗುಲಿದಾಗ ಪತ್ನಿ ವೀಣಾ ಕೂಗಿಕೊಂಡಿದ್ದಾರೆ. ಪತ್ನಿ ವೀಣಾರನ್ನ ಕೈಯಿಂದ ಎಳೆದುಕೊಳ್ಳಲು ಪ್ರಯತ್ನಿಸಿದಾಗ ಇಬ್ಬರಿಗೂ ಶಾಕ್ ಹೊಡೆದಿದ್ದು, ಪರಿಣಾಮ ದಂಪತಿ ಮೃತಪಟ್ಟಿದ್ದಾರೆ.
ಇನ್ನು, ದಂಪತಿಗಳಿಬ್ಬರ ಸಾವಿನಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳಕ್ಕೆ ಮಾಯಕೊಂಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.