ದಾವಣಗೆರೆ; ಜ.11: ಜಿಲ್ಲಾ ವ್ಯಾಪ್ತಿಯಲ್ಲಿ ಸಂಘ-ಸಂಸ್ಥೆಗಳು, ಮತದಾರರಿಗೆ ಸಂಬಧಿಸಿದಂತೆ ಯಾವುದೇ ಮಾಹಿತಿಗಳನ್ನು ಭೌತಿಕವಾಗಿ ಮತ್ತು ತಂತ್ರಜ್ಞಾನ ಸಲಕರಣೆಗಳ ಮೂಲಕ ಸಂಗ್ರಹಣೆ ಮಾಡುವುದಾಗಲಿ ಮನೆ-ಮನೆ ಸಮೀಕ್ಷೆ ಮಾಡುವುದಾಗಲಿ ಗುರುತಿನ ಚೀಟಿಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿಯನ್ನು ಮತದಾರರಿಗೆ ನೇರವಾಗಿ ಅಂಚೆ ಮೂಲಕ ಮತ್ತು ಮತಗಟ್ಟೆ ಅಧಿಕಾರಿಗಳ ಮೂಲಕ ವಿತರಿಸಲಾಗುತ್ತ್ತದೆ. ಮತದಾರರು ಅನಧಿಕೃತ ಸಂಸ್ಥೆ/ವ್ಯಕ್ತಿಗಳಿಗೆ ಹಣ ನೀಡಿ ಗುರುತಿನ ಚೀಟಿಗಳನ್ನು ಪಡೆಯಬಾರದು ಮತ್ತು ಇಂತಹ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಮತದಾರರ ಸಹಾಯವಾಣಿ 1950ಗೆ ಮಾಹಿತಿ ನೀಡಲು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.