(MOPR Internship) ಮಿನಿಸ್ಟ್ರಿ ಆಫ್ ಪಂಚಾಯತಿ ರಾಜ್ ಇಂಟರ್ನ್ಶಿಪ್ ಸ್ಕೀಮ್ 2024 ರ ವತಿಯಿಂದ ಸ್ಕಾಲರ್ ಶಿಪ್ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಂಡರ್ಗ್ರಾಜುಯೇಟ್, ಗ್ರಾಜುಯೇಟ್, ಪೋಸ್ಟ್ ಗ್ರಾಜುಯೇಟ್, ಡಾಕ್ಟರಲ್ ಮತ್ತು ಪೋಸ್ಟ್-ಡಾಕ್ಟರಲ್ ಪದವೀಧರರು ಅಥವಾ ಸಂಶೋಧನಾ ವಿದ್ಯಾರ್ಥಿಗಳಿಗೆ ಮಿನಿಸ್ಟ್ರಿ ಆಫ್ ಪಂಚಾಯಿತಿ ರಾಜ್ ನೀಡುತ್ತಿರುವ ಸ್ಕಾಲರ್ ಶಿಪ್ ಇದಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು ಎಂಬುದರ ಕುರಿತು ಇಲ್ಲಿದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?:
* ಭಾರತ ಅಥವಾ ವಿದೇಶದಲ್ಲಿ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿAದ ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ಕೋರ್ಸ್ಗಳು, ಡಾಕ್ಟರಲ್ (ಪಿಎಚ್ಡಿ), ಅಥವಾ ಪೋಸ್ಟ್-ಡಾಕ್ಟರಲ್ ಪದವಿಯನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.
* ಕಳೆದ ಎರಡು ವರ್ಷಗಳಲ್ಲಿ ಭಾರತ ಅಥವಾ ವಿದೇಶದಲ್ಲಿ ಯಾವುದೇ ನಿರ್ದಿಷ್ಟ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಎಷ್ಟು ಸ್ಕಾಲರ್ ಶಿಪ್:
7,000 ಮಾಸಿಕ
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/MOPR4 ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
31-03-2026