ಹೂವಿನಹಡಗಲಿ ತಾಲೂಕಿನಲ್ಲಿ ಜಾನುವಾರುಗಳಿಗೆ ಗಂಟುರೋಗ: 8 ಜಾನುವಾರುಗಳು ಮೃತ

ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸುತ್ತಿದ್ದು, ಈ ಸಾಂಕ್ರಾಮಿಕ ರೋಗ ಪ್ರಾಣಿಗಳ ಜೀವ ಹಿಂಡುತ್ತಿದ್ದು, ನದಿ ತೀರದ ಹಲವು ಗ್ರಾಮಗಳಿಗೆ ರೋಗ ವ್ಯಾಪಿಸಿದೆ. ಹೌದು, ಜಿಲ್ಲೆಯ ಹೂವಿನಹಡಗಲಿ ತಾಲೂಕಿನ…

cattle

ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸುತ್ತಿದ್ದು, ಈ ಸಾಂಕ್ರಾಮಿಕ ರೋಗ ಪ್ರಾಣಿಗಳ ಜೀವ ಹಿಂಡುತ್ತಿದ್ದು, ನದಿ ತೀರದ ಹಲವು ಗ್ರಾಮಗಳಿಗೆ ರೋಗ ವ್ಯಾಪಿಸಿದೆ.

ಹೌದು, ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ವಿವಿಧ ಗ್ರಾಮಗಳ 400ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಈ ಸಾಂಕ್ರಾಮಿಕ ರೋಗದಿಂದ ಎರಡು ದಿನಗಳಲ್ಲಿ 8 ಜಾನುವಾರು ಮೃತಪಟ್ಟಿವೆ.

ಇನ್ನು, ತಾಲೂಕಿನ ಮೈಲಾರ, ಹಿರೇಹಡಗಲಿಯಲ್ಲಿ 50 ಸಾವಿರ ರೂ ಬೆಲೆಯ 4 ಎತ್ತುಗಳು ಕಾಯಿಲೆಯಿಂದ ಸಾವಿಗೀಡಾಗಿದ್ದು, ಹಿರೇಕೊಳಚಿಯಲ್ಲಿ ಒಂದು ಆಕಳು, ಹ್ಯಾರಡದಲ್ಲಿ ಎತ್ತು, ಕರು, ಮೈಲಾರದಲ್ಲಿ ಕರು ಮೃತಪಟ್ಟಿವೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.