ಹರಪನಹಳ್ಳಿ: ಬರದ ನಾಡಾಗಿರುವ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ದೊಡ್ಡ ಕೆರೆ 22 ವರ್ಷಗಳ ನಂತರ ಕೋಡಿ ಬಿದ್ದಿದ್ದು, ಸುತ್ತಲಿನ ಹಳ್ಳಿಗಳ ಜನರಿಗೆ ವೀಕ್ಷಣಿಯ ಕೇಂದ್ರವಾಗಿದೆ.
ಹೌದು, ನಿನ್ನೆ ಸುರಿದ ಭಾರಿ ಮಳೆಯಿಂದ ತಾಲೂಕಿನ ಐತಿಹಾಸಿಕ ಅರಸೀಕೆರೆಯ ದೊಡ್ಡಕೆರೆ ಕೋಡಿ ಬಿದ್ದು ತುಂಬಿ ಹರಿಯುತ್ತಿದ್ದು, ಜಾನುವಾರು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು, ರೈತರಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿದೆ. ಐತಿಹಾಸಿಕ ಅರಸೀಕೆರೆಯ ದೊಡ್ಡಕೆರೆ ಸುಮಾರು 105 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ರೈತರ ಜೀವನಾಡಿ ಎಂದು ಕರೆಸಿಕೊಂಡಿದೆ.
ಬೆಳೆಗಳಿಗೆ ಸೌಲಭ್ಯ: ಅರಸೀಕೆರೆಯ ದೊಡ್ಡಕೆರೆ ಭರ್ತಿಯಾಗಿರುವುದರಿಂದ ಕೃಷಿ ಚಟುವಟಿಕೆ, ಜಾನುವಾರುಗಳಿಗೆ ಅನುಕೂಲವಾಗಿದೆ. ಗದ್ದೆಗಳಲ್ಲಿ ಭತ್ತ ಕಬ್ಬು ಬೆಳೆಗೆ ಅನುಕೂಲವಾಗಿದೆ. ಇನ್ನು, ಈ ಕೆರೆ 22 ವರ್ಷಗಳ ಬಳಿಕ ಕೆರೆ ಭರ್ತಿಯಾಗಿದೆ. ಹೌದು, ಹಿಂದೆ ಈ ಕೆರೆ 2000 ರಲ್ಲಿ ಕೊಡಿ ಬಿದ್ದಿತ್ತು.