ಹರಪನಹಳ್ಳಿ: ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯ ಕರ್ತರು ಭಾನುವಾರ ಪಟ್ಟಣದಲ್ಲಿ ಬಾರಿಸು ಸಿಲಿಂಡರ್ ಡಿಂಡಿಮ ಎಂಬ ವಿನೂತನ ಪ್ರತಿಭಟನೆ ನಡೆಸಿ, ಉಪ್ಪಾರಗೇರಿ, ಕಂಚಿಕೇರಿ ಓಣಿಗಳಲ್ಲಿ ಜನರು ಸಿಲಿಂಡರ್‌ಗಳನ್ನು ಹೊರಗಿಟ್ಟು ಬಾರಿಸುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: ಅಕ್ರಮ ನಗದು ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ನಿರೀಕ್ಷಣಾ ಜಾಮೀನು ಕೋರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅರ್ಜಿ
ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ ಮಹಾಂತೇಶ್ ಮಾತನಾಡಿ, ಆಡಳಿತದಲ್ಲಿರುವ ಡಬಲ್ ಎಂಜಿನ್ ಸರ್ಕಾರ ಅಡುಗೆ ಅನಿಲ ಸೇರಿ ದಿನಸಿ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ವಿಫಲ ವಾಗಿದ್ದು, ಬಡವರ ಪರ ಕಾಳಜಿಯಿಲ್ಲದ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠಕಲಿಸಬೇಕು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕವಿತಾ ವಾಗೀಶ್, ಗಂಗಜ್ಜಿ ನಾಗರಾಜ್, ಎಚ್. ನೇತ್ರ, ಬಸಮ್ಮ, ಗುರು ಬಸವರಾಜ್, ಸಂಕಳ್ಳಿ ಶಿವಣ್ಣ, ದಾದಾಪೀರ್ ಇತರರಿದ್ದರು.
ಇದನ್ನು ಓದಿ: ರಾಜಕೀಯ ನಿವೃತ್ತಿ ಬಗ್ಗೆ ಶಾಮನೂರು ಶಿವಶಂಕರಪ್ಪ ಹೇಳಿದ್ದೇನು?