ಅರಸೀಕೆರೆ: ಕರೋನ ಹಿನ್ನಲೆ ಹರಪನಹಳ್ಳಿ ತಾಲೂಕಿನಲ್ಲಿ ಅರಸೀಕೆರೆ ಹೋಬಳಿಯ ಅಡವಿ ಮಲ್ಲಾಪುರ ಬಳಿ ಇರುವ ಮೈಲಾರಲಿಂಗೇಶ್ವರ ಜಾತ್ರಾ (ಕಣಿ ಸಿದ್ದೇಶ್ವರ ) ಮಹೋತ್ಸವ ಪ್ರತಿ ವರ್ಷದಂತೆ ನಿನ್ನೆ ಸರಳವಾಗಿ ನಡೆಯಿತು.
ಅದರಂತೆ ಭರತ ಹುಣ್ಣಿಮೆಯ ಏಳನೇ ದಿನದಂದು ಅಡವಿ ಮಲ್ಲಾಪುರ ಬಳಿ ಇರುವ ಮೈಲಾರ ಲಿಂಗೇಶ್ವರ (ಕಣಿ ಸಿದ್ದೇಶ್ವರ) ಜಾತ್ರಾ ಮಹೋತ್ಸವ ಸರಳವಾಗಿ ನಡೆದಿದ್ದು, ಗೊರವಯ್ಯ “ಹುಟ್ಟಿದ ಶಿಶುವಿಗೆ ಅಂಬಲಿ ಸಂಪಾದೀತಲೇ ಪರಾಕ್” ಎಂದು ಕಾರ್ಣಿಕ ನುಡಿದಿದ್ದು, ಇಲ್ಲಿನ ಜನ ಈ ಕಾರ್ಣಿಕ ನುಡಿಯನ್ನು ವರ್ಷದ ಭವಿಷ್ಯವಾಣಿ ಎಂದೇ ನಂಬಿದ್ದಾರೆ.
ಇನ್ನು, ಭರತ ಹುಣ್ಣುಮೆಯ ಮೂರನೇ ದಿನದಂದು ಹಡಗಲಿ ತಾಲೂಕಿನ ಮೈಲಾರದಲ್ಲಿ ನಡೆಯುವ ಮೈಲಾರ ಲಿಂಗೇಶ್ವರ ಕಾರ್ಣಿಕವನ್ನು ರಾಜ್ಯದ ಜನತೆ ವರ್ಷದ ಭವಿಷ್ಯವಾಣಿ ಎಂದು ನಂಬಿದ್ದಾರೆ.