ಕ್ಯಾನ್ಸರ್ ವಿಶ್ವದಾದ್ಯಂತ ಸಾವುಗಳಿಗೆ ಪ್ರಮುಖ ಕಾರಣ
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಇತ್ತೀಚಿನ ಮಾಹಿತಿಯ ಪ್ರಕಾರ, ಕ್ಯಾನ್ಸರ್ ವಿಶ್ವದಾದ್ಯಂತದ ಸಾವುಗಳಿಗೆ ಪ್ರಮುಖ ಕಾರಣವಾಗಿದೆ.
10 Million DEATHS
2020ರಲ್ಲಿ ಕ್ಯಾನ್ಸರ್ ನಿಂದ
ಪ್ರತಿ 6ರಲ್ಲಿ 1 ಸಾವಿಗೆ ಕ್ಯಾನ್ಸರ್ ಕಾರಣ
ಅತ್ಯಂತ ಸಾಮಾನ್ಯ ಕ್ಯಾನ್ಸರ್ ಗಳು:-
- ಶ್ವಾಸಕೋಶದ ಕ್ಯಾನ್ಸರ್
- ಸ್ತನ ಕ್ಯಾನ್ಸರ್
- ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್
- ಪ್ರಾಸ್ಟೇಟ್ ಕ್ಯಾನ್ಸರ್
- 23 ದೇಶಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿದೆ.
ಕ್ಯಾನ್ಸರ್ ನಿಂದ ಸಂಭವಿಸುವ ಮೂರನೇ ಒಂದು ಭಾಗದಷ್ಟು ಸಾವುಗಳಿಗೆ ಕಾರಣವಾಗುವ ಅಂಶಗಳು:-
- ತಂಬಾಕು ಸೇವನೆ
- ಹೈ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) BMI
- ಮದ್ಯಪಾನ
- ಹಣ್ಣು & ತರಕಾರಿಗಳ ಕಡಿಮೆ ಸೇವನೆ
- ದೈಹಿಕ ಚಟುವಟಿಕೆಯ ಕೊರತೆ
ಎಚ್ಚರಗೊಳ್ಳುವ ಸಮಯ:-
ಮಾರಣಾಂತಿಕ ಕಾಯಿಲೆಯಾಗಿರುವ ಕ್ಯಾನ್ಸರ್, ದುರದೃಷ್ಟವಶಾತ್ ಆರಂಭದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಮಾನವ ದೇಹದೊಳಗಿನ ಸಾಮಾನ್ಯ ಜೀವಕೋಶಗಳು ಗಡ್ಡೆಯಾಗಿ ರೂಪಾಂತರಗೊಂಡಾಗ ಕ್ಯಾನ್ಸರ್ ಸಂಭವಿಸುತ್ತದೆ.
ಕ್ಯಾನ್ಸರ್ ಎನ್ನುವುದು ದೇಹದ ಯಾವುದೇ ಭಾಗದ ಮೇಲೆ ಪರಿಣಾಮ ಬೀರುವ ರೋಗಗಳ ದೊಡ್ಡ ಗುಂಪಿನ ಸಾಮಾನ್ಯ ಪದವಾಗಿದೆ. ಅನೇಕ ಕ್ಯಾನ್ಸರ್ ಗಳನ್ನು ಮೊದಲೇ ಪತ್ತೆ ಹಚ್ಚಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು.
ಬೆಳಿಗ್ಗೆ ಕಂಡುಬರುವ ಸಂಕೇತಗಳು:-
ಬೆಳಿಗ್ಗೆ ಎದ್ದ ನಂತರ ಕೆಮ್ಮು, ಆಯಾಸವಾಗುತ್ತಿದ್ದರೆ ಅಥವಾ ಎರಡು ವಾರಗಳಿಗಿಂತ ಹೆಚ್ಚು ಕಾಲ ನಿರಂತರ ಗಂಟಲು ನೋವು ಕಾಣಿಸಿಕೊಂಡರೆ ಮತ್ತು ಯಾವುದೇ ಸುಧಾರಣೆಯ ಲಕ್ಷಣಗಳು ಕಂಡುಬಾರದಿದ್ದಲ್ಲಿ ಕ್ಯಾನ್ಸರ್ ಸಂಕೇತವಾಗಿರಬಹುದು ಎಂದು ತಜ್ಞರು ನಂಬುತ್ತಾರೆ.
ಅದರಲ್ಲೂ ವಿಶೇಷವಾಗಿ, ಧೂಮಪಾನ ಮಾಡುವವರಿಗೆ ಬೆಳಿಗ್ಗೆ ನಿರಂತರ ಕೆಮ್ಮು ಬರುವುದು ಕ್ಯಾನ್ಸರ್ ನ ಸಾಧ್ಯತೆಯಿರುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?:-
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಹೆಚ್ಚು ಸಮತೋಲಿತ ಆಹಾರ ಸೇವನೆ, ಆರೋಗ್ಯಕರ ಜೀವನಶೈಲಿ, ಮದ್ಯಪಾನ & ತಂಬಾಕು ಸೇವನೆಯಿಂದ ದೂರವಿರಬೇಕು ಮತ್ತು ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು.
ತಂಬಾಕಿನ ಹೊಗೆ, ಆಸ್ಕೋಹಾಲ್, ಅಫ್ಲಾಟಾಕ್ಸಿನ್ (ಆಹಾರ ಮಾಲಿನ್ಯಕಾರಕ), ಆರ್ಸೆನಿಕ್ (ಕುಡಿಯುವ ನೀರಿನ ಮಾಲಿನ್ಯಕಾರಕ), ಮತ್ತು ಜೈವಿಕ ಕಾರ್ಸಿನೋಜೆನ್‌ಗಳು, ವೈರಸ್‌ಗಳು, ಬ್ಯಾಕ್ಟಿರಿಯಾಗಳು ಕೂಡ ಕ್ಯಾನ್ಸರ್‌ಗೆ ಕಾರಣವಾಗುತ್ತವೆ.
ಆರಂಭಿಕ ರೋಗನಿರ್ಣಯ ಮತ್ತು ಸ್ಕ್ರೀನಿಂಗ್ :-
ಆರಂಭಿಕ ರೋಗನಿರ್ಣಯ ಮೂಲಕ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಬಹುದು. ಅಲ್ಲದೆ, ರೋಗಿಯು ಕಡಿಮೆ ಅನಾರೋಗ್ಯದ ಜೊತೆಗೆ ಕಡಿಮೆ ವೆಚ್ಚದ ಚಿಕಿತ್ಸೆಗಳೊಂದಿಗೆ ಬದುಕುಳಿಯುವ ಸಾಧ್ಯತೆಗಳು ಹೆಚ್ಚಿರುತ್ತವೆ.
ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುವ ಮೊದಲು ನಿರ್ದಿಷ್ಟ ಕ್ಯಾನ್ಸರ್ ಅಥವಾ ಕ್ಯಾನ್ಸರ್ ಪೂರ್ವ ಸಂಕೇತಗಳನ್ನು ಗುರುತಿಸಲು ಸ್ಟೀನಿಂಗ್ ಸಹಕಾರಿಯಾಗಿದೆ.
ಕ್ಯಾನ್ಸರ್ ರೋಗನಿರ್ಣಯದ ಲಕ್ಷಣಗಳು:-
ಡಬ್ಲ್ಯುಎಚ್‌ಒ ಪ್ರಕಾರ, 2018ರಲ್ಲಿ ಜಾಗತಿಕವಾಗಿ ಪತ್ತೆಯಾದ ಸುಮಾರು ಶೇ.13ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ಹೆಲಿಕೋಬ್ಯಾಕ್ಟರ್ ಪೈಲೋರಿ, ಹೂಮನ್ ಪ್ಯಾಪಿಲೋಮವೈರಸ್ (ಎಚ್ ಪಿವಿ), ಹೆಪಟೈಟಿಸ್ ಬಿ ವೈರಸ್, ಹೆಪಟೈಟಿಸ್ ಸಿ ವೈರಸ್ ಮತ್ತು ಎಸ್ಟೀನ್-ಬಾರ್ ವೈರಸ್ ಸೇರಿದಂತೆ ಕಾರ್ಸಿನೋಜೆನಿಕ್ ಸೋಂಕುಗಳು ಕಾರಣವಾಗಿವೆ.
ಕೆಲವು ದೀರ್ಘಕಾಲದ ಸೋಂಕುಗಳು ಕೂಡ ಕ್ಯಾನ್ಸರ್ ಗೆ ಕಾರಣವಾಗುತ್ತವೆ.
ಚಿಕಿತ್ಸೆಗಳು:-
ಪ್ರತಿಯೊಂದು ರೀತಿಯ ಕ್ಯಾನ್ಸರ್ ಗೆ ನಿರ್ದಿಷ್ಟ ಚಿಕಿತ್ಸಾ ಕ್ರಮದ ಅಗತ್ಯವಿರುತ್ತದೆ. ಇದರ ಚಿಕಿತ್ಸೆಯು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು/ಅಥವಾ ಸಿಸ್ಟಮಿಕ್ ಥೆರಪಿ ಚಿಕಿತ್ಸೆಯನ್ನು (ಕಿಮೊಥೆರಪಿ, ಹಾರ್ಮೋನ್ ಚಿಕಿತ್ಸೆಗಳು, ಉದ್ದೇಶಿತ ಜೈವಿಕ ಚಿಕಿತ್ಸೆಗಳು) ಒಳಗೊಂಡಿರುತ್ತದೆ.
ಉಪಶಾಮಕ ಆರೈಕೆಯು ಕ್ಯಾನ್ಸರ್‌ನಿಂದ ಉಂಟಾಗುವ ರೋಗಲಕ್ಷಣಗಳು ಮತ್ತು ತೊಡಕುಗಳನ್ನು ಗುಣಪಡಿಸುವ ಬದಲು ನಿವಾರಿಸಲು ಮತ್ತು ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವ ಚಿಕಿತ್ಸೆಯಾಗಿದೆ.
ಕ್ಯಾನ್ಸರ್ ವಿರುದ್ಧ ಹೋರಾಡುವ ಆಹಾರಗಳು:-
ನಿಯಮಿತವಾಗಿ ಆಂಟಿ-ಕಾರ್ಸಿನೋಜೆನಿಕ್ ಆಹಾರಗಳನ್ನು ಸೇರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ತರಕಾರಿ, ಹಣ್ಣುಗಳು ಮತ್ತು ಇತರ ಸಸ್ಯ ಆಧಾರಿತ ಆಹಾರಗಳಲ್ಲಿ ಕಂಡುಬರುವ ಜೈವಿಕ ಸಕ್ರಿಯ ಸಂಯುಕ್ತಗಳು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ.
- ದಾಳಿಂಬೆ
- ದ್ರಾಕ್ಷಿಹಣ್ಣು
- ಚೆರ್ರಿ ಹಣ್ಣು
- ಬೆರಿಹಣ್ಣು
- ಕ್ರೂಸಿಫೆರಸ್ ತರಕಾರಿಗಳು