ಹೊಸಪೇಟೆ(ವಿಜಯನಗರ): 2022-23ನೇ ಸಾಲಿನಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕೊಟ್ಟೂರು ಟೌನ್ ಇಲ್ಲಿನ ಕಟ್ಟಡ ಶಿಥಿಲಗೊಂಡಿರುವ ಕಾರಣ ಬಾಡಿಗೆ ಕಟ್ಟಡಗಳ ಅವಶ್ಯಕತೆ ಇರುವುದರಿಂದ ಕೊಟ್ಟೂರು ಪಟ್ಟಣದ ಸುತ್ತಮುತ್ತಲ್ಲಿರುವ ಖಾಲಿ ಇರುವ ಸುಸಜ್ಜಿತ ಕಟ್ಟಡವನ್ನು ಲೋಕೋಪಯೋಗಿ ಇಲಾಖೆಯವರು ನಿಗದಿಪಡಿಸಿದ ದರದಲ್ಲಿ ಬಾಡಿಗೆ ನೀಡಲು ಕಟ್ಟಡದ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೂಡ್ಲಿಗಿಯ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಪಾಪತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಟ್ಟಡದ ಮಾಲೀಕರು ತಮ್ಮ ಕಟ್ಟಡಗಳನ್ನು ಬಾಡಿಗೆ ನೀಡಲು ಸಂಡೂರು ರಸ್ತೆಯ ಸಿ.ಡಿ.ಪಿ.ಓ. ಆಫೀಸ್ ಕೆಳಮಹಡಿಯ ಕೂಡ್ಲಿಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಅಥವಾ ದೂ.08391-220583ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.