ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಬರುವ 2021-22ನೇ ಸಾಲಿನ ಎಸ್‍ಎಫ್‍ಸಿ ಅನುದಾನ ಅಡಿ ಶೇ24.10 ರಲ್ಲಿ ವಸತಿ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೊಸಪೇಟೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಪರಿಶಿಷ್ಟ ಜಾತಿ ಪಕ್ಕಾ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯ ಧನ ನೀಡುವುದು. ಬೇಕಾದ ದಾಖಲೆಗಳು: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅದಾರ ಪ್ರತಿ, ರೇಷನ್ ಕಾರ್ಡ್ ಪ್ರತಿ, ಚುನಾವಣಾ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಅಡಮಾನ ಪ್ರತಿ ಸಲ್ಲಿಸಬೇಕು.
*ಹೊಸಪೇಟೆ ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಪೂರ್ಣಗೊಳಿಸಲು ಸಹಾಯ ಧನ ನೀಡುವುದು.
ಬೇಕಾದ ದಾಖಲೆಗಳು: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಪ್ರತಿ, ರೇಷನ್ ಕಾರ್ಡ್ ಪ್ರತಿ, ಚುನಾವಣಾ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಅಡಮಾನ ಪ್ರತಿಗಳನ್ನು ಸಲ್ಲಿಸಬೇಕು.
*ಹೊಸಪೇಟೆ ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರಕಾರದ ವಿವಿಧ ಇಲಾಖೆಗಳಿಂದ ಆಯೋಜಿಸಲ್ಪಡುವ ರಾಜ್ಯ /ರಾಷ್ಟ್ರ ಮಟ್ಟದ ಕ್ರೀಡೆ, ಕಲೆ, ಭಾಷಣ ಹಾಗೂ ಇತರೆ ಸಾಂಸ್ಕøತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಲ್ಲಿ ಅಥವಾ ಜಯಗೊಳಿಸಿದ್ದಲ್ಲಿ ಆಯಾ ವರ್ಷದಲ್ಲಿ ಪೆÇ್ರೀತ್ಸಾಹ ಧನ ನೀಡುವುದು.
ಬೇಕಾದ ದಾಖಲೆಗಳು: ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅಧಾರ ಪ್ರತಿ, ರೇಷನ್ ಕಾರ್ಡ್ ಪ್ರತಿ, ಚುನಾವಣಾ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, 2021-2022ನೇ ಸಾಲಿನ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮತ್ತು ಪ್ರಶಸ್ತಿ ಪತ್ರಗಳು.
ಅರ್ಜಿಯೊಂದಿಗೆ ಇತ್ತೀಚಿನ 4 ಪಾಸ್‍ಪೋರ್ಟ್ ಸೈಜ್ ಪೋಟೋದೊಂದಿಗೆ ದಾಖಲೆಗಳನ್ನು ದೃಢೀಕೃತದೊಂದಿಗೆ ಸಲ್ಲಿಸಬೇಕು ಮತ್ತು ತಡವಾಗಿ ಬಂದಂತಹ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.