ಸಿದ್ದಾಪುರ: ಜಾತ್ರೆಯೊಳಗೆ ಏಕಾಏಕಿ ಕಾರು ನುಗ್ಗಿಸಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿ, 9 ಮಂದಿ ಗಾಯಗೊಂಡ ಘಟನೆ ಉತ್ತರಕನಗನಡ ಜಿಲ್ಲೆಯ ಸಿದ್ದಾಪುರದ ರವೀಂದ್ರನಗರ ಸರ್ಕಲ್ ಬಳಿ ನಡೆದಿದೆ.
ಪಟ್ಟಣದ ಚಂದ್ರಗುತ್ತಿ ರಸ್ತೆಯ ಅಯ್ಯಪ್ಪ ಸ್ವಾಮಿ ಜಾತ್ರೆಯ ನಿಮಿತ್ತ ಹಾಕಲಾಗಿದ್ದ ಬ್ಯಾರಿಕೇಡ್ ಒಳಗೆ ಚಾಲಕ ಏಕಾಏಕಿ ಕಾರು ನುಗ್ಗಿಸಿದ್ದು ಪರಿಣಾಮ ಜಾತ್ರೆಗೆಂದು ಬಂದಿದ್ದ 9ಕ್ಕೂ ಅಧಿಕ ಮಂದಿಗೆ ಕಾರು ಡಿಕ್ಕಿಯಾಗಿದೆ. ದೇವಸ್ಥಾನದ ಮಂಟಪಕ್ಕೆ ಕಾರು ಭಕ್ತರನ್ನು ಗುದ್ದಿದ್ದು, ಪರಿಣಾಮ ಕವಲಕೊಪ್ಪ ಗ್ರಾಮದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಮಾರ್ಗಮದ್ಯೆ ಕೊನೆಯುಸಿರೆಳೆದಿದ್ದಾರೆ.
ಕಾರು ಡಿಕ್ಕಿಯಾದ ಪರಿಣಾಮ ಮಹಿಳೆಯರು, ಪುರುಷರು ಸೇರಿದಂತೆ ಒಂಭತ್ತಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಕೂಡಲೇ ಗಾಯಾಳುಗಳನ್ನು ಸಿದ್ದಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.