ಹರಪನಹಳ್ಳಿಯಲ್ಲಿ ಭೀಕರ ಅಪಘಾತ: ಹೊತ್ತಿ ಉರಿದ ಡೀಸೆಲ್ ಟ್ಯಾಂಕ್; ಒರ್ವ ಬೈಕ್ ಸವಾರ ದಹನ!

ಹರಪನಹಳ್ಳಿ: ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಕಂಚಿಕೇರಿ ಬೆಂಡಿಗೆರೆ ರಸ್ತೆಯ ರೈಲ್ವೆ ಗೇಟ್ ಬಳಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಬೈಕ್ ಸವಾರನೊಬ್ಬ ಸಜೀವ ದಹನವಾಗಿದ್ದಾನೆ. ಬೈಕ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರನನ್ನು ತಪ್ಪಿಸಲು…

petrol tanker vijayaprabha news

ಹರಪನಹಳ್ಳಿ: ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಕಂಚಿಕೇರಿ ಬೆಂಡಿಗೆರೆ ರಸ್ತೆಯ ರೈಲ್ವೆ ಗೇಟ್ ಬಳಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಬೈಕ್ ಸವಾರನೊಬ್ಬ ಸಜೀವ ದಹನವಾಗಿದ್ದಾನೆ.

ಬೈಕ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ನಡೆದಿದೆ. ಈ ವೇಳೆ, ಬೈಕ್ ಸವಾರ ಲಾರಿ ಅಡಿ ಸಿಲುಕಿದ್ದಾನೆ. ಸವಾರನ ಮೇಲೆ ಡೀಸೆಲ್ ತುಂಬಿದ್ದ ಲಾರಿ ಬಿದ್ದು, ಧಗಧಗನೇ ಹೊತ್ತಿ ಉರಿದಿದ್ದು, ಬೈಕ್ ಸವಾರ 32ವರ್ಷದ ಮೋರಗೆರೆಯ ನಾಗರಾಜ ಸ್ಥಳದಲ್ಲಿ ಸಜೀವ ದಹನವಾಗಿದ್ದು, ಬೈಕ್‌ನಲ್ಲಿದ್ದ ಮತ್ತೊಬ್ಬ ಸವಾರ 38ವರ್ಷದ ಚಂದ್ರು ಮೋರಗೆರೆ ಗಂಭೀರ ಗಾಯಗಳಾಗಿದ್ದು, ಹರಪನಹಳ್ಳಿಯ ಸಾರ್ವಜನಿಕ ಆಸ್ವತ್ರೆಗೆ ದಾಖಲಾಗಿದ್ದಾನೆ.

ಇನ್ನು, ಲಾರಿ ಚಾಲಕ ಲಾರಿಯಿಂದ ಹಾರಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ. 4 ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನು, ಘಟನಾ ಸ್ಥಳಕ್ಕೆ ಸಿ. ಪಿ. ಐ. ನಾಗರಾಜ ಕಮ್ಮಾರ ಬೇಟಿ ನೀಡಿ ಪರಿಶಿಲಿಸಿದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.