ಬೆಂಗಳೂರು: ರಾಜ್ಯದಲ್ಲಿ ಕರೋನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಸಾಗಿಸಲು ಅಂಬ್ಯುಲೆನ್ಸ್ ಗಳ ಕೊರತೆ, ಚಿಕೆತ್ಸೆ ನೀಡಲು ವೆಂಟಿಲೇಟರ್ ಗಳ ಸಮಸ್ಯೆ, ಸುರಕ್ಷಾ ಕ್ರಮಗಳನ್ನು ಅನುಸರಿಸಲು ಪಿಪಿಇ ಕಿಟ್ ಗಳ ಕೊರತೆ ಕಾಣುತ್ತಿದೆ.
ಈಗಾಗಲೇ ಕೋವಿಡ್ 19 ನಿರ್ಮೂಲನೆಗಾಗಿ ಅನೇಕ ಗಣ್ಯರು, ಜನಸಾಮಾನ್ಯರು ಸರ್ಕಾರಕ್ಕೆ ಹಣ, ಅಂಬ್ಯುಲೆನ್ಸ್, ಪಿಪಿಇ ಕಿಟ್ ಇನ್ನಿತರೇ ರೂಪದಲ್ಲಿ ದೇಣಿಗೆ ನೀಡಿದ್ದಾರೆ. ಈಗ ಕೋವಿಡ್ 19 ನಿರ್ಮೂಲನೆಗಾಗಿ ಅವಿರತವಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಜೀ ಕನ್ನಡ ವಾಹಿನಿ ವತಿಯಿಂದ 20 ಅಂಬ್ಯುಲೆನ್ಸ್, 25 ಹೆಚ್ ಎಫ್ ಎನ್ ಸಿ ಯಂತ್ರಗಳು ಹಾಗೂ 4000 ಪಿಪಿಇ ಕಿಟ್ ಗಳನ್ನು ದೇಣಿಗೆ ನೀಡಿದ್ದಾರೆ.
ಜೀ ಕನ್ನಡ ವಾಹಿನಿ ವತಿಯಿಂದ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ, ಅವರು 20 ಅಂಬ್ಯುಲೆನ್ಸ್, 25 ಹೆಚ್ ಎಫ್ ಎನ್ ಸಿ ಯಂತ್ರಗಳು ಹಾಗೂ 4000 ಪಿಪಿಇ ಕಿಟ್ ಗಳನ್ನು ಸ್ವೀಕರಿಸಿದರು.
ಈ ಸರಳ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಅರೋಗ್ಯ ಸಚಿವ ಶ್ರೀರಾಮುಲು, ಸಂಪುಟ ಸಹೋದ್ಯೋಗಿಗಳು, ಗಣ್ಯರು ಪಾಲ್ಗೊಂಡಿದ್ದರು.
ಕೋವಿಡ್ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ಉಪಯುಕ್ತ ಉಪಕರಣಗಳನ್ನು ದೇಣಿಗೆಯಾಗಿ ನೀಡಿದ ಜೀ ಕನ್ನಡ ವಾಹಿನಿಯ ಸಾಮಾಜಿಕ ಕಳಕಳಿಗೆ ಅನೇಕ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅರೋಗ್ಯ ಸಚಿವ ಶ್ರೀರಾಮುಲು ಅವರು “ಕೋವಿಡ್ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ಉಪಯುಕ್ತ ಉಪಕರಣಗಳನ್ನು ದೇಣಿಗೆಯಾಗಿ ನೀಡಿದ ಜೀ ಕನ್ನಡ ವಾಹಿನಿಯ ಸಾಮಾಜಿಕ ಕಳಕಳಿ ನಿಜಕ್ಕೂ ಶ್ಲಾಘನೀಯ” ಎಂದು ಹೇಳಿದ್ದಾರೆ.