ಬ್ಯಾಂಕ್ ಖಾತೆದಾರರು ಬಹಳ ಜಾಗರೂಕರಾಗಿರಬೇಕು. ಏಕೆಂದರೆ ವಂಚಕರು ನಿಮ್ಮ ಖಾತೆಯಿಂದ ಯಾವಾಗ ಮತ್ತು ಹೇಗೆ ಹಣವನ್ನು ವಂಚಿಸುತ್ತಾರೋ ತಿಳಿಯುವುದಿಲ್ಲ. ಇತ್ತೀಚಿಗೆ ತಂತ್ರಜ್ಞಾನದಿಂದ ಆನ್ಲೈನ್ ಹಗರಣಗಳು ಕೂಡ ಹೆಚ್ಚುತ್ತಿವೆ. ಆದ್ದರಿಂದ ಬ್ಯಾಂಕ್ ಗ್ರಾಹಕರು ಜಾಗರೂಕರಾಗಿರಬೇಕು. ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.
ಒಂದೆಡೆ ಜನರು ಕರೋನಾ ವೈರಸ್ನಿಂದ ಬಳಲುತ್ತಿದ್ದಾರೆ. ಮತ್ತೊಂದೆಡೆ ಸೈಬರ್ ಹಗರಣಗಳು ಕೂಡ ಹೆಚ್ಚುತ್ತಿವೆ. ವ್ಯಾಲೆಟ್ ಅಕೌಂಟ್ ಇಂದ ಹಣ ಕಟ್ ಆಗಿದೆ, ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗಿದೆ ಎಂದು ಪ್ರತಿದಿನ ಸಾಕಷ್ಟು ಪ್ರಕರಣಗಳು ಬರುತ್ತಲೇ ಇರುತ್ತವೆ.
ವಂಚಕರು ನಿಮ್ಮ ಮೊಬೈಲ್ ಸಂಖ್ಯೆಯಾ ಮೂಲಕವೇ ನಿಮ್ಮ ಖಾತೆಯಿಂದ ಹಣ ವಂಚನೆ:
ವಂಚಕರು ನಿಮ್ಮ ಮೊಬೈಲ್ ಸಂಖ್ಯೆಯಾ ಮೂಲಕವೇ ನಿಮ್ಮ ಖಾತೆಯಿಂದ ಹಣವನ್ನು ಕದಿಯುವ ಅಪಾಯವೂ ಇದೆ. ಮೊಬೈಲ್ ಫೋನ್ ಬ್ಯಾಂಕಿಂಗ್ ಬಳಸುವವರು ಜಾಗರೂಕರಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮೊಬೈಲ್ ಫೋನ್ ಮೂಲಕ ಮನೆಯಿಂದ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುತ್ತಿದ್ದಾರೆ. ಮೊಬೈಲ್ ಖಾತೆಯಲ್ಲಿ ಬ್ಯಾಂಕ್ ಖಾತೆ, ಬಾಕಿ ಮತ್ತು ವಹಿವಾಟು ವಿವರಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕೂಡ ಬರುತ್ತದೆ.
ಅದಕ್ಕೆ ವಂಚಕರು ಬ್ಯಾಂಕ್ ಗ್ರಾಹಕರಿಂದ ಸ್ವಿಮ್ ಸ್ವಾಪ್ ಮೂಲಕ ಹಣವನ್ನು ಸುಲಭವಾಗಿ ಸುಲಿಗೆ ಮಾಡುತ್ತಾರೆ. ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿದೆ ಅಥವಾ ಸಿಮ್ ಕಾರ್ಡ್ ಮುರಿದುಹೋಗಿದೆ ಎಂಬ ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ವಂಚಕರು ಹೊಸ ಮೊಬೈಲ್ ಸಿಮ್ ಕಾರ್ಡ್ ತೆಗೆದುಕೊಳ್ಳುತ್ತಾರೆ. ಇದರಿಂದ ನಿಮ್ಮ ಫೋನ್ನಲ್ಲಿರುವ ಸಿಮ್ ಕಾರ್ಡ್ಗೆ ನೆಟ್ವರ್ಕ್ ಬರಲ್ಲ. ನಿಮ್ಮ ಫೋನ್ಗೆ ಯಾವುದೇ ಒಟಿಪಿ ಬರುವುದಿಲ್ಲ. ಇತರೆ ಅಲರ್ಟ್ ಮೆಸೇಜ್ ಸಹ ಬರುವುದಿಲ್ಲ.
ವಂಚಕರು ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಈ ರೀತಿ ಕದಿಯುತ್ತಾರೆ. ನಿಮ್ಮ ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೀವು ಸೇವಾ ಪೂರೈಕೆದಾರರ ಬಳಿಗೆ ಹೋಗುವಷ್ಟರಲ್ಲೇ ವಂಚನೆ ನಡೆದಿರುತ್ತದೆ. ಆದ್ದರಿಂದ, ನಿಮ್ಮ ಮೊಬೈಲ್ ಫೋನ್ನಲ್ಲಿ ನೆಟ್ವರ್ಕ್ ಕಾಣಿಸದಿದ್ದರೆ, ವಿಳಂಬವಿಲ್ಲದೆ ತಕ್ಷಣವೇ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ. ನೀವು ವಿಳಂಬ ಮಾಡಿದರೆ, ನೀವು ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನು ಓದಿ: ನಿಮ್ಮ ಹಣಕ್ಕೆ ಹೆಚ್ಚಿನ ಲಾಭ; ಇಲ್ಲಿವೆ 5 ಅದ್ಬುತ ಯೋಜನೆಗಳು!