ಭಗವಾನ್ ಸೂರ್ಯನನ್ನು ಭಾನುವಾರ ಪೂಜಿಸುವುದು ಶುಭವೆಂದು ಹೇಳಲಾಗುತ್ತಿದ್ದು, ಧಾರ್ಮಿಕ ನಂಬಿಕೆಗಳ ಪ್ರಕಾರ, ಯಾರಾದರೂ ಪ್ರತಿದಿನ ಸೂರ್ಯ ದೇವರನ್ನು ಪೂಜಿಸಲು ಸಾಧ್ಯವಾಗದಿದ್ದರೆ, ಆ ವ್ಯಕ್ತಿಯು ಭಾನುವಾರ ಪೂಜಿಸಬಹುದು. ಉಳಿದ ದಿನಗಳ ಫಲವನ್ನೂ ಅವನು ಭಾನುವಾರದ ಒಂದೇ ಪೂಜೆಯಲ್ಲಿ ಪಡೆಯುತ್ತಾನೆ.
ಜ್ಯೋತಿಷಿಗಳ ಪ್ರಕಾರ, ಸೂರ್ಯ ದೇವರನ್ನು ಆರಾಧಿಸುವುದರಿಂದ ಬುದ್ಧಿವಂತಿಕೆ, ಏಕಾಗ್ರತೆ, ಶಕ್ತಿ, ಆರೋಗ್ಯ, ಆಯಸ್ಸು ಮತ್ತು ಅದೃಷ್ಟ ಬರುತ್ತದೆ ಎಂದು ಹೇಳಲಾಗಿದ್ದು, ಸೂರ್ಯ ದೇವನನ್ನು ಪೂಜಿಸುವುದರಿಂದ ಸರ್ಕಾರಿ ಉದ್ಯೋಗದಲ್ಲಿ ಯಶಸ್ಸು ಮತ್ತು ಪ್ರತಿಷ್ಠೆಯು ಲಭ್ಯವಾಗುತ್ತದೆ ಎಂದು ಹೇಳಲಾಗುತ್ತದೆ.
ಸೂರ್ಯನ ಅನುಗ್ರಹ ಪಡೆಯಲು ಈ ಮಂತ್ರ ಪಠಿಸಿ
” ಓಂ ಹ್ರಾಂ ಹೀಂ ಹೌಂ ಸಃ ಸೂರ್ಯಾಯ ನಮಃ ” ಸೂರ್ಯನ ಅನುಗ್ರಹ ಪಡೆಯಲು ಈ ಮಂತ್ರವನ್ನು ಪಠಿಸಿಬೇಕು, ಈ ಮಂತ್ರವನ್ನು ಪಠಿಸುವುದರಿಂದ ಸಮೃದ್ಧಿ ಮತ್ತು ಯಶಸ್ಸು ವೃದ್ಧಿಯಾಗುವುದಲ್ಲದೆ, ನಮ್ಮಲ್ಲಿರುವ ನಕರಾತ್ಮಕ ಪ್ರವೃತ್ತಿಯನ್ನು ತೆಗೆದುಹಾಕುತ್ತದೆ .