ಸೌತಾಂಪ್ಟನ್: ಭಾರತ-ನ್ಯೂಜಿಲ್ಯಾಂಡ್ ನಡುವೆ ಸೌತಾಂಪ್ಟನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಕೇವಲ 3 ದಿನಗಳು ಉಳಿದಿದ್ದು ಐಸಿಸಿ ಈ ಐತಿಹಾಸಿಕ ಫೈನಲ್ ಗೆಲ್ಲುವ ತಂಡಕ್ಕೆ ನೀಡಲಾಗುವ ಬಹುಮಾನದ ಮೊತ್ತವನ್ನು ಪ್ರಕಟಿಸಿದೆ.
ಹೌದು, ಟೆಸ್ಟ್ ಚಾಂಪಿಯನ್ ತಂಡಕ್ಕೆ ಟ್ರೋಫಿ ಜೊತೆಗೆ ₹11.71 ಕೋಟಿ(1.6 ಮಿಲಿಯನ್ ಡಾಲರ್) ಬಹುಮಾನದ ಮೊತ್ತ ದೊರೆಯಲಿದೆ. ಅದೇ ರೀತಿ, ರನ್ನರ್ ಅಪ್ ತಂಡ ₹5.8 ಕೋಟಿ(800,000 ಡಾಲರ್) ಪಡೆಯಲಿದ್ದು, ಒಂದು ವೇಳೆ ಪಂದ್ಯ ಡ್ರಾ ಆದಲ್ಲಿ ಬಹುಮಾನದ ಮೊತ್ತವನ್ನು ಇತ್ತಂಡಗಳಿಗೆ ಸಮನಾಗಿ ಹಂಚಲಾಗುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.