ಮಹಿಳೆಯರಿಗೆ ಮೂಲಭೂತ ಶಿಕ್ಷಣ, ಔದ್ಯೋಗಿಕ, ಔದ್ಯಮಿಕ ಪೊತ್ಸಾಹದ ಜೊತೆಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕು – ರಶ್ಮಿ ರವಿಕಿರಣ್

ಬೆಂಗಳೂರು : ಬೆಂಗಳೂರು ನಗರ ಸಾಧಕರು ಎಂದರೆ ವಿಶ್ವ ಮಟ್ಟದ ಸಾಧಕರು, ಅವಕಾಶಗಳ ತವರು ಬೆಂಗಳೂರು ವಿಶ್ವಕ್ಕೆ ಸಲ್ಲುವಂತಹದ್ದು, ಇಂತಹ ಬೆಂಗಳೂರು ನಗರದಲ್ಲಿ ಸಾಧನೆ ಮಾಡಿದ ಮಹಿಳೆಯರು ಅಪರೂಪ ಮತ್ತು ಬಹಳ ವಿಶೇಷವಾದದ್ದು ಎಂದು…

ಬೆಂಗಳೂರು : ಬೆಂಗಳೂರು ನಗರ ಸಾಧಕರು ಎಂದರೆ ವಿಶ್ವ ಮಟ್ಟದ ಸಾಧಕರು, ಅವಕಾಶಗಳ ತವರು ಬೆಂಗಳೂರು ವಿಶ್ವಕ್ಕೆ ಸಲ್ಲುವಂತಹದ್ದು, ಇಂತಹ ಬೆಂಗಳೂರು ನಗರದಲ್ಲಿ ಸಾಧನೆ ಮಾಡಿದ ಮಹಿಳೆಯರು ಅಪರೂಪ ಮತ್ತು ಬಹಳ ವಿಶೇಷವಾದದ್ದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.

ಇನ್ನು, ಬಿ ಪ್ಯಾಕ್, ಬಿ ಕ್ಲಿಪ್ ಹಳೆ ವಿದ್ಯಾರ್ಥಿ ಸಂಘ ಮತ್ತು ಶ್ರೀ ಕೃಷ್ಣ ವೆಲ್ ನೆಸ್ ಯೋಗ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ಬೆಂಗಳೂರು ನಗರದ 100 ಮಹಿಳಾ ಸಾಧಕಿಯರಿಗೆ, ಬೆಂಗಳೂರು ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಇನ್ನು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಡಾ. ಅಶ್ವಥ್ ನಾರಾಯಣ್ ಅವರು, ನಿಮ್ಮೆಲ್ಲರ ಸಾಧನೆ ವಿಶ್ವಕ್ಕೆಲ್ಲ ಮಾದರಿಯಾದದ್ದು. ನಿಮ್ಮೆಲ್ಲರ ಸಾಧನೆಯನ್ನು ಗುರುತಿಸಿ, ಬೆನ್ನುತಟ್ಟಿ ಪೊತ್ಸಾಹ ನೀಡುವುದರ ಜೊತೆಗೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದು ಅತ್ಯಂತ ಶ್ಲಾಘನೀಯ ಎಂದರು.

Vijayaprabha Mobile App free

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಈಸ್ಟ್ ವೆಸ್ಟ್ ಕಾಲೇಜ್ ನ ಚೇರ್ ಮೆನ್ ರಶ್ಮಿ ರವಿ ಕಿರಣ್ ಅವರು, ಹೇಗೆ ಪ್ರತಿ ಪುರುಷನ ಸಾಧನೆಯಿಂದ ಒಬ್ಬ ಮಹಿಳೆ ಇರ್ಥಳೋ ಅದೇ ರೀತಿ ಪ್ರತಿ ಮಹಿಳೆಯ ಸಾಧನೆ ಹಿಂದೆ ಒಬ್ಬ ಪುರುಷನ ಬೆಂಬಲ ಇರುತ್ತದೆ. ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಹೆಜ್ಜೆ ಹಾಕಬೇಕಾಗಿದ್ದು, ಪುರುಷ ಮತ್ತು ಮಹಿಳೆ ನಡುವೆ ಸ್ಪರ್ಧೆ ಇರಬಾರದು, ಸಹಕಾರ ಇರಬೇಕು, ಈಗಾಗಿದ್ದಲ್ಲಿ ಉತ್ತಮ ಮತ್ತು ಮೌಲ್ಯಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.

ನಮ್ಮ ಸರ್ಕಾರಗಳೂ ಮಹಿಳಾ ಸಬಳೀಕರಣಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅದರ ಸದುಪಯೋಗಪಡೆದುಕೊಂಡಾಗ ಮಾತ್ರ ನಮ್ಮ ದೇಶದ ನಾರೀಯರ ಶಕ್ತಿಯೂ ಪ್ರಭಾವಿಸುತ್ತದೆ ಎಂದು ಹೇಳಿದರು.

ಮಹಿಳೆಯರು ಸುರಕ್ಷಿತರಾಗಿ, ಸ್ವಾವಲಂಬಿಗಳಾಗಿ, ಔದ್ಯಮಿಕವಾಗಿ ಮತ್ತು ಆರ್ಥಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಮೌಲ್ಯಯುತ ಗುಣಮಟ್ಟದ ಜೀವನನಡೆಸಲು ಸಾಧ್ಯ ಮತ್ತು ಮಹಿಳೆಯರ ಕೌಶಲ್ಯಾಭಿವೃದ್ಧಿಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡರೆ, ನಿಜಕ್ಕೂ ದೇಶದ ಅಭಿವೃದ್ಧಿ ಮಾನದಂಡದಲ್ಲಿ ಮಹತ್ತರವಾದ ಬದಲಾವಣೆ ತರಲು ಸಾಧ್ಯ ಎಂದು ಅವರು ಹೇಳಿದರು.

ಇಂತಹ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಮಹಿಳೆಯರ ಆತ್ಮಬಲ ಮತ್ತು ದಕ್ಷತೆಯನ್ನು ವೃದ್ಧಿಸುತ್ತದೆ. ಮಹಿಳೆಯರಲ್ಲಿ ಅಪಾರವಾದಶಕ್ತಿಯಿದ್ದು, ಅವರಿಗೆ ಉತ್ತೇಜನ ನೀಡುವ ಕೆಲಸವಾಗಬೇಕಿದೆ. ಮಹಿಳೆಯರಲ್ಲಿ ಅವರಲ್ಲಿರುವ ಸಾಮಥ್ರ‍್ಯದ ಬಗ್ಗೆ ಅರಿವು ಮೂಡಿಸಬೇಕಿದ್ದು, ಅಗತ್ಯ ಮೂಲಭೂತ ಶಿಕ್ಷಣ, ಔದ್ಯೋಗಿಕ ಹಾಗೂ ಔದ್ಯಮಿಕ ಪೊತ್ಸಾಹದ ಜೊತೆಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ರಶ್ಮಿ ರವಿಕಿರಣ್ ಅವರು ಹೇಳಿದ್ದಾರೆ.

ಓದುವ ಹದಿಹರೆಯದ ಯುವತಿಯರಿಗೆ ಅವರ ಗುರಿಯ ಬಗ್ಗೆ ನಿಖರತೆ ಮೂಡಿಸಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಬೇಕಾಗಿದ್ದು, ಅವರ ಆಸಕ್ತಿಗೆ ಪೊತ್ಸಾಹ ನೀಡಬೇಕು. ಆಗ ಮಹಿಳೆಯೂ ಸಮಾಜಕ್ಕೆ ದೇಶಕ್ಕೆ ಮಹತ್ವದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂಬುದು ರಶ್ಮಿ ರವಿಕಿರಣ್ ಅವರ ಅಭಿಮತವಾಗಿದೆ.

ತೊಟ್ಟಿಲು ತೂಗುವ ಕೈ ದೇಶವನ್ನು ಆಳಿದ ನಿದರ್ಶನಗಳು ನಮ್ಮ ಇತಿಹಾಸದಲ್ಲಿದ್ದು, ಇವತ್ತಿನ ಆಧುನಿಕ ನಾರಿ ಎಲ್ಲಾ ಸಿದ್ದ ಸೂತ್ರಗಳನ್ನು ಮುರಿದು ಸಾಧನೆ ಮಾಡುತ್ತಿದ್ದಾಳೆ. ಅಂತಹ ಮಹಿಳೆಗೆ ಉತ್ತೇಜನ ಮತ್ತು ಪ್ರೋತ್ಸಾಹ ಹಾಗೂ ಅವಕಾಶಗಳನ್ನು ನೀಡಬೇಕು ಎಂದು ಅವರು ಹೇಳಿದರು.

ಬೆಂಗಳೂರು ಮಹಿಳಾ ಸಾಧಕಿಯರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಸಚಿವ ಸಂತೋಷ್ ಲಾಡ್, ಈಸ್ಟ್ ವೆಸ್ಟ್ ಕಾಲೇಜ್ ನ ಚೇರ್ ಮೆನ್ ರಶ್ಮಿ ರವಿಕಿರಣ್, ಶಾಸಕ ರಿಝ್ವಾನ್ ಆರ್ಶದ್, ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಬಿ ಪ್ಯಾಕ್ ನ ಆನಂದ್ ಬೇಗೂರು ಇನ್ನು ಮೊದಲಾದವರು ಉಪಸ್ಥಿತಿರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.