ಮುಂಬೈ: ಮುಂಬೈನ ಬೋರಿವಲಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಮೇಲೆ ಇಳಿಯಲು ಪ್ರಯತ್ನಿಸುತ್ತಿದ್ದ ಮಹಿಳೆಯನ್ನು ಚಲಿಸುವ ರೈಲು ಎಳೆದೊಯ್ದ ನಂತರ ರಕ್ಷಣೆ ಮಾಡಲಾದ ಘಟನೆ ನಡೆದಿದೆ.
ಭಾರತದ ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ನಿಲ್ದಾಣದಲ್ಲಿರುವ ಭದ್ರತಾ ಸಿಬ್ಬಂದಿಯೊಬ್ಬರು ಸಮತೋಲನ ಕಳೆದುಕೊಂಡು ಬಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ.
ಮಹಿಳೆಯನ್ನು ಬಹುತೇಕ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಕಿರಿದಾದ ಜಾಗದಲ್ಲಿ ಸಿಕ್ಕಿಹಾಕಿಕೊಳ್ಳುವ ಹಂತದಲ್ಲಿದ್ದು ಈ ವೇಳೆ ಅದೃಷ್ಟವಶಾತ್ ಭದ್ರತಾ ಸಿಬ್ಬಂದಿ ಓಡಿಬಂದು ಮಹಿಳೆಯನ್ನು ಎಳೆದುಕೊಂಡಿದ್ದಾರೆ. ಪರಿಣಾಮ ಮಹಿಳೆ ಅಪಾಯದಿಂದ ಪಾರಾಗಿದ್ದು, ಇಲ್ಲದಿದ್ದರೆ ಗಂಭೀರವಾಗಿ ಗಾಯಗೊಳ್ಳುತ್ತಿದ್ದಳು ಅಥವಾ ಸಾವನ್ನಪ್ಪುವ ಸಾಧ್ಯತೆಗಳಿದ್ದಿದ್ದನ್ನು ವೀಡಿಯೊ ತೋರಿಸುತ್ತದೆ.