ಮುಂಬೈ : ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ ನೀಡಿರುವ ಮಹಾರಾಷ್ಟ್ರ ಸರ್ಕಾರ, ಇನ್ಮುಂದೆ ಸೂಪರ್ಮಾರ್ಕೆಟ್ಗಳು, ವಾಕ್-ಇನ್ ಸ್ಟೋರ್ಗಳು ಮತ್ತು 1,000 ಚದರ ಅಡಿಗಿಂತ ದೊಡ್ಡದಾಗಿರುವ ಜನರಲ್ ಸ್ಟೋರ್ಗಳಲ್ಲೂ ಕೂಡ ವೈನ್ ಮಾರಾಟಕ್ಕೆ ಅನುಮತಿ ನೀಡಿದೆ.
ಹೌದು, ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮದ್ಯದಂಗಡಿಗಳ ಮೂಲಕ ಮಾತ್ರ ವೈನ್ ಮಾರಾಟಕ್ಕೆ ಅವಕಾಶ ನೀಡುವ ಸದ್ಯದ ವೈನ್ ನೀತಿಯು ಕಳೆದ 20 ವರ್ಷಗಳಿಂದ ಜಾರಿಯಲ್ಲಿದೆ.
ಆದರೀಗ ಮಹಾರಾಷ್ಟ್ರ ಸರ್ಕಾರವು ಸೂಪರ್ಮಾರ್ಕೆಟ್ಗಳು, ವಾಕ್-ಇನ್ ಸ್ಟೋರ್ಗಳಲ್ಲೂ ವೈನ್ ಮಾರಾಟ ಮಾಡುವ ಪರಿಷ್ಕೃತ ನೀತಿಯನ್ನು ಜಾರಿಗೆ ತಂದಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.