ಬೆಂಗಳೂರು: ಮಹಿಳೆಯೊಬ್ಬಳು ಗಂಡನನ್ನು ಕೊಲೆ ಮಾಡಿ ಗುಂಡಿ ತೋಡಿ ಶವವನ್ನು ಹೂತಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನ ಹೊರವಲಯ ಹಳೇಹಳ್ಳಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಹೌದು, ಪ್ರೇಮ್ ಬದ್ವಾಲ್ ಎಂಬಾತನನ್ನ ಆತನ ಪತ್ನಿ ಶೋಭಾ ಬದ್ವಾಲ್ ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದ್ದು, ಗಂಡನನ್ನು ಕೊಂದು ಗುಂಡಿ ತೋಡಿ ಮುಚ್ಚಿರುವ ಶೋಭಾ ಬದ್ವಾಲ್, ಮೊಬೈಲ್ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾಳೆ ಎನ್ನಲಾಗಿದೆ.
ಹಲವು ದಿನಗಳ ಹಿಂದೆಯೇ ಶೋಭಾ ಬದ್ವಾಲ್ ಪತಿಯನ್ನು ಕೊಲೆ ಮಾಡಿರುವ ಸಾಧ್ಯತೆಯಿದ್ದು, ಶವ ಹೂತಿಟ್ಟ ಸ್ಥಳದಲ್ಲಿ ದುರ್ವಾಸನೆ ಬಂದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಂದು ಪರಿಶೀಲನೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆಯೆಂಬ ಮಾಹಿತಿ ಲಭ್ಯವಾಗಿದೆ.




