ಪಿಎಂ ಕಿಸಾನ್ ಹಣ ಪಡೆಯಲು ಯಾರು ಅನರ್ಹರು?
*ಕೆಲವರ ಹೆಸರಲ್ಲಿ ಜಮೀನು ಇದ್ದರೂ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅವರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಸಿಗಲ್ಲ
*ಜಮೀನು ಹೊಂದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರಾಗಿರುವವರು ಪಿಎಂ ಕಿಸಾನ್ ಹಣ ಪಡೆಯಲು ಅರ್ಹರಲ್ಲ
*ವಿಧಾನಸಭೆ ಸದಸ್ಯರು, ಸಂಸತ್ ಸದಸ್ಯರು ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ
*ಸಾಂಸ್ಥಿಕ ಭೂಮಿ ಹೊಂದಿರುವವರು ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಲ್ಲ
*ಕೃಷಿ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರ ಕುಟುಂಬದ ಒಬ್ಬ ವ್ಯಕ್ತಿ ಮಾತ್ರ ಹಣ ಪಡೆಯಲು ಅರ್ಹ.
ಸರ್ಕಾರದಿಂದ ಅನರ್ಹ ರೈತರ ಪಟ್ಟಿ:-
ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರವೇ ಪಿಎಂ ಕಿಸಾನ್ ಯೋಜನೆಯಡಿ ನೆರವು ಪಡೆಯಲು ಅವಕಾಶವಿದ್ದು, ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಮಾತ್ರ ಹಣ ಪಡೆಯಬಹುದು.
ಆದರೆ ಗಂಡ ಹೆಂಡತಿ ಇಬ್ಬರೂ ಹಣ ಪಡೆಯುತ್ತಿರುವ ಅಂಶ ಬಯಲಾಗಿದ್ದು,ಸರ್ಕಾರ ಈಗಾಗಲೇ ಹಲವೆಡೆ ಅನರ್ಹ ರೈತರ ಪಟ್ಟಿಯನ್ನು ಕೃಷಿ ಇಲಾಖೆಗೆ ಸಲ್ಲಿಸಿದೆ.