ಬೆಳಗ್ಗೆ: 7 ರಿಂದ 9 ಗಂಟೆ ಫೋಟೋ/ರೀಲ್ ಅಪ್ಲೋಡ್ ಮಾಡಲು ಸೂಕ್ತ ಸಮಯವಾಗಿದ್ದು, ಸಾಮಾನ್ಯವಾಗಿ ಬೆಳಗ್ಗೆ ಈ ಸಮಯದಲ್ಲಿ ಜನರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.
ಮಧ್ಯಾಹ್ನ: 12 ರಿಂದ 1 ಗಂಟೆ ಮಧ್ಯದಲ್ಲಿ ಪೋಸ್ಟ್ ಮಾಡಲು ಉತ್ತಮ ಸಮಯವಾಗಿದ್ದು, ಜನರು ಊಟದ ವಿರಾಮದಲ್ಲಿರುತ್ತಾರೆ. ಮನೆಯಲ್ಲಿದ್ದವರು ಎಲ್ಲಾ ಕೆಲಸಗಳನ್ನು ಮಾಡಿ ಈ ಸಮಯದಲ್ಲಿ ಫ್ರೀಯಾಗಿರುತ್ತಾರೆ. ಈ ವೇಳೆ ಜನರು ಅಧಿಕವಾಗಿ ಫೋನ್ ಬಳಕೆ ಮಾಡುತ್ತಾರೆ.
ಇದನ್ನೂ ಓದಿ: Champions Trophy | ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ; ಫೆಬ್ರವರಿ 23 ರಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಕದನ
ಸಂಜೆ: 5 ರಿಂದ 7ರ ನಡುವೆಯೂ ಸೋಶಿಯಲ್ ಮೀಡಿಯಾ ಬಳಕೆದಾರರ ಸಂಖ್ಯೆ ಏರಿಕೆಯಾಗಲಿದ್ದು, ಈ ಸಮಯದಲ್ಲಿ ಇಡೀ ದಿನ ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳಲು ಮೊಬೈಲ್ ನೋಡುತ್ತಾರೆ.
ವಾರಾಂತ್ಯ: ವಾರಾಂತ್ಯದಲ್ಲಿ ಪೋಸ್ಟ್ ಮಾಡುವುದು ಅತ್ಯಂತ ಲಾಭದಾಯಕವಾಗುತ್ತದೆ. ವೀಕೆಂಡ್ ದಿನಗಳಲ್ಲಿ ಬಹುತೇಕರು ಮೊಬೈಲ್ ನೋಡುತ್ತಲೇ ಸಮಯ ಕಳೆಯಲಿದ್ದು, ಶನಿವಾರ ಮಧ್ಯಾಹ್ನ ಮತ್ತು ಭಾನುವಾರ ಬೆಳಗ್ಗೆ ಪೋಸ್ಟ್ ಮಾಡಲು ಉತ್ತಮ ಸಮಯವಾಗಿದೆ.