ಸಿಗ್ನಲ್ ಜಂಪ್, ಮೊಬೈಲ್ ಬಳಕೆ, ಹೆಲ್ಮೆಟ್ ಇಲ್ಲದೆ ಸಂಚರಿಸುವವರಿಗೆ ಎಚ್ಚರಿಕೆ

ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ, ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘಿಸುವ ಜನರು ಇನ್ಮೇಲೆ ತಪ್ಪು ಮಾಡಿದ ಬಳಿಕ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೌದು, ಎಸ್ಎಂಎಸ್ ನೋಟಿಸ್…

New traffic rules vijayaprabha

ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ, ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘಿಸುವ ಜನರು ಇನ್ಮೇಲೆ ತಪ್ಪು ಮಾಡಿದ ಬಳಿಕ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಹೌದು, ಎಸ್ಎಂಎಸ್ ನೋಟಿಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಸಂಚಾರ ಪೊಲೀಸರು ಈಗ ಜನರಿಗೆ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಲು ಯೋಜಿಸಿದ್ದು, ನಿಯಮ ಮೀರಿದ ಸಾಕ್ಷ್ಯಕ್ಕೆ ಫೋಟೋ ಅಥವಾ ವಿಡಿಯೋ ಕಳುಹಿಸಲಿದ್ದಾರೆ. ಈ ಯೋಜನೆ ಶೀಘ್ರ ಕಾರ್ಯರೂಪಕ್ಕೆ ಬರಲಿದೆ.

STOP LINE ಅನ್ನು ದಾಟುತ್ತಿದ್ದೀರಾ..?

Vijayaprabha Mobile App free

ಅನೇಕ ವಾಹನ ಚಾಲಕರು ತಮಗರಿವಿಲ್ಲದೆ ಈ ನಿಯಮವನ್ನು ಉಲ್ಲಂಘಿಸಿರುತ್ತಾರೆ. ರೆಡ್ ಸಿಗ್ನಲ್ ಬಿದ್ದಾಗ ಜೀಬ್ರಾ ಕ್ರಾಸಿಂಗ್‌ನ ಮುಂಭಾಗದಲ್ಲಿರುವ STOP LINE ಅನ್ನು ದಾಟಿ ವಾಹನವನ್ನು ನಿಲ್ಲಿಸುತ್ತಾರೆ.

ಈ STOP LINE ನಿಯಮವನ್ನು ಉಲ್ಲಂಘಿಸಿದರೆ 100 ರಿಂದ 1000 ರೂ. ದಂಡ ವಿಧಿಸಲಾಗುತ್ತದೆ. ಆದ್ದರಿಂದ ಇನ್ಮುಂದೆ ಈ STOP LINE ಅನ್ನು ದಾಟದಂತೆ ಎಚ್ಚರಿಕೆ ವಹಿಸಿ, ಸಂಚಾರ ನಿಯಮಗಳನ್ನು ಪಾಲಿಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.